ಕಾಪು, ಜ. 16 (DaijiworldNews/SM): ಶಬರಿಮಲೆಯಲ್ಲಿ ಅಯ್ಯಪ್ಪ ಮಾಲಾಧಾರಿ ನಿಧನರಾಗಿರುವ ಘಟನೆ ಜನವರಿ 16ರ ರವಿವಾರದಂದು ವರದಿಯಾಗಿದೆ. ಉದ್ಯಾವರದ ಸಂಪಿಗೆ ನಗರ ಸಮೀಪದ ನಿವಾಸಿ ಸುರೇಶ್ ಬಂಗೇರ(52) ಹೃದಯಾಘಾತದಿಂದ ನಿಧನರಾದವರು.
ಉಡುಪಿಯ ಉದ್ಯಾವರ ಅಯ್ಯಪ್ಪಸ್ವಾಮಿ ಮಂದಿರದಿಂದ ಭಕ್ತರು ಹೊರಟಿದ್ದರು. 32 ಮಾಲಾಧಾರಿಗಳ ತಂಡದಲ್ಲಿ ಸುರೇಶ್ ಒಬ್ಬರಾಗಿದ್ದರು. ಉದ್ಯಾವರದಲ್ಲಿ ಮಹಾಪೂಜೆ ಮಾಡಿ ಇರುಮುಡಿ ಕಟ್ಟಿ ಶನಿವಾರದಂದು ರೈಲಿನ ಮೂಲಕ ತೆರಳಿದ್ದರು. ಆದರೆ, ಅವರಿಗೆ ಶಬರಿಮಲೆಯಲ್ಲಿ ಹೃದಯಘಾತವಾಗಿದ್ದು, ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಇನ್ನು ಸುರೇಶ್ ಉದ್ಯಾವರ ಸಂಪಿಗೆ ನಗರದಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ.