ಕಾಸರಗೋಡು, ಜ 16 (DaijiworldNews/HR): ಕುಂಬಳೆ ಸಮೀಪದ ಕಿದೂರುನಲ್ಲಿ ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಸುಮಾರು 500 ಕಿಲೋ ಗಿಂತ ಅಧಿಕ ಸುಡು ಮದ್ದುಗಳನ್ನು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ವಶಪಡಿಸಿ ಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಆರಿಕ್ಕಾಡಿಯ ಅಬೂಬಕ್ಕರ್ ಸಿದ್ದೀಕ್ (41) ಎಂದು ಗುರುತಿಸಲಾಗಿದೆ.
ಇನ್ನು ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ.