ಉಡುಪಿ , ಜ 16 (DaijiworldNews/HR): ಜಿಲ್ಲೆಯ ಉದ್ಯಾವರ ಅಯ್ಯಪ್ಪ ಸ್ವಾಮಿ ಮಂದಿರದಿಂದ ಹೊರಟ ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರು ಶಬರಿಮಲೆಯಲ್ಲಿ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನುರಿ ಕ್ಷಾ ಚಾಲಕರಾಗಿ ದುಡಿಯುತಿದ್ದ ಉದ್ಯಾವರ ಸಂಪಿಗೆ ನಗರದ ಸುರೇಶ್ ಬಂಗೇರ ( 52) ಎಂದು ಗುರುತಿಸಲಾಗಿದೆ.
ಉದ್ಯಾವರ ಅಯ್ಯಪ್ಪ ಮಂದಿರದಿಂದ 32 ಸ್ವಾಮಿಗಳ ಜೊತೆ ತೆರಳಿದ್ದ ಸುರೇಶ್ ಸ್ವಾಮಿಯವರು ಸುಮಾರು 28 ಬಾರಿ ಶಬರಿಮಲೆಗೆ ಹೋಗಿ ಬಂದಿದ್ದಾರೆ.
ಇನ್ನು ಮಹಾಪೂಜೆ ಮಾಡಿ ಇರುಮುಡಿ ಕಟ್ಟಿ ನಿನ್ನೆ ರೈಲು ಮುಖಾಂತರ ಶಬರಿಮಲೆಗೆ ಹೊರಟ್ಟಿದ್ದರು ಎನ್ನಲಾಗಿದೆ.