ಸುಳ್ಯ, ಡಿ 06(SM): ಫೈನಾನ್ಸ್ ಹಣ ಪಾವತಿಸದ್ದಕ್ಕೆ ಸುಳ್ಯದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೃಷಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಖಾಸಗಿ ಫೈನಾನ್ಸ್ ದಾರರಿಂದ ಮೀಟರ್ ಬಡ್ಡಿಗೆ ಸಾಲ ಪಡೆದು ಅದನ್ನು ಹಿಂತಿರುಗಿಸಲಾಗದ್ದಕ್ಕೆ ಕೃಷಿಕ ಬಾಳೆಂಬಿ ನಿವಾಸಿ ರವೀಂದ್ರರಿಗೆ ಸುಳ್ಯ ಠಾಣಾ ಇನ್ಸ್ ಪೆಕ್ಟರ್ ಮಂಜುನಾಥ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಫೈನಾನ್ಸಿಯರ್ ಡಿ. ಕೇಶವ ಎಂಬವರಿಂದ ಒಂದು ಲಕ್ಷ ಹಣ ಸಾಲ ಪಡೆದಿದ್ದು, ಬಳಿಕ ರವೀಂದ್ರ ಅವರು ಸಾಲ ತೀರಿಸಲಾಗದೆ ಚಕ್ರ ಬಡ್ಡಿಯ ಸುಳಿಗೆ ಸಿಲುಕಿದ್ದಾರೆ. ಬಳಿಕ ಕೇಶವ ಅವರು ರವೀಂದ್ರ ವಿರುದ್ಧ ಸುಳ್ಯ ಕೋರ್ಟ್ ನಲ್ಲಿ ದೂರು ನೀಡಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಹಾಕಿದರೂ ರವೀಂದ್ರ ಅವರಿಗೆ ನ್ಯಾಯಾಲಯದಲ್ಲಿ ಸೋಲಾಗಿದೆ.
ಸುಳ್ಯ ಕೋರ್ಟ್ ರವೀಂದ್ರ ವಿರುದ್ಧ ವಾರೆಂಟ್ ಹೊರಡಿಸುತ್ತಿದ್ದಂತೆ ರವೀಂದ್ರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಸ್ಟೇ ಅರ್ಡರ್ ಪಡೆದಿದ್ದರು. ಸ್ಟೇ ಅರ್ಡರ್ ಪಡೆದು ಬೆಂಗಳೂರಿನಿಂದ ಸುಳ್ಯಕ್ಕೆ ಆಗಮಿಸುವಾಗ ಸಬ್ ಇನ್ಸ್ ಪೆಕ್ಟರ್ ಠಾಣೆಯಲ್ಲಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.