ಕುಂದಾಪುರ, ಜ 15 (DaijiworldNews/HR): ಉಡುಪಿ ಕೃಷ್ಣ ಮಠಕ್ಕೆ ಬಂದಿದ್ದ ಮಹಿಳೆಯೊಬ್ಬರ ಬ್ಯಾಗ್ ಹರಿದು ಅದರಲ್ಲಿದ್ದ 10,000 ನಗದು, ಮನೆಯ ಬೀಗ ಹಾಗೂ ಕೆಲವು ಬಿಲ್ಗಳನ್ನು ಕಳವು ಮಾಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ವಾಸಿಗಳಾಗಿರುವ ತಮ್ಮಿ ಶೆಟ್ಟಿ ಮಣಿ, ಪ್ರೀಯಾಂಕ ಕಾಕಣಿ, ಇಟ್ಟಾ ಜಾನ್ಸಿ, ಇಟ್ಟಾ ಸಾಗರ, ಹರಿಬಾಬು ಎಂದು ಗುರುತಿಸಲಾಗಿದೆ.
ಲಕ್ಷ್ಮಿ ಎಂಬವರು ಸಂಕ್ರಾತಿ ಪ್ರಯುಕ್ತ ಕುಂದಾಪುರದಿಂದ ಉಡುಪಿ ಕೃಷ್ಣ ಮಠಕ್ಕೆ ಬಂದಿದ್ದು, ಅನಂತೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ತೀರ್ಥ ಪಡೆಯುವಾಗ 3 ಜನ ಮಹಿಳೆಯರು ಹಾಗೂ ಇಬ್ಬರು ಗಂಡಸರು ಸೇರಿ ಲಕ್ಷ್ಮಿ ರವರ ಬಟ್ಟೆಯ ಕೈ ಚೀಲದ ಒಂದು ಬದಿಯನ್ನು ಯಾವುದೋ ಹರಿತವಾದ ಆಯುಧದಿಂದ ಹರಿದು ಚೀಲದಲ್ಲಿದ್ದ ಸಣ್ಣ ಪರ್ಸ್ನ್ನು ಕಳವು ಮಾಡಿದ್ದು, ಪರ್ಸ್ನಲ್ಲಿ ರೂ. 10,000 ನಗದು, ಮನೆಯ ಬೀಗ ಹಾಗೂ ಕೆಲವು ಬಿಲ್ಗಳು ಕಳವು ಮಾಡಿದ್ದು, ಈ ಬಗ್ಗೆ ಲಕ್ಷ್ಮಿಯವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸ್ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ಕೈಗೊಂಡು ಕೃಷ್ಣಮಠದ ರಥಬೀದಿಯಲ್ಲಿರುವ ಸಿಸಿ ಕ್ಯಾಮರಾ ಹಾಗೂ ಡ್ರೋನ್ ಕ್ಯಾಮರಾಗಳ ಪುಟೇಜ್ ಪರಿಶೀಲನೆ ನಡೆಸಿದಾಗ ಆರೋಪಿಗಳ ಚಲನವಲನದ ಬಗ್ಗೆ ಉಡುಪಿ ನಗರ ಠಾಣೆಯ ಅಪರಾಧ ವಿಭಾಗದ ಅಧಿಕಾರಿ/ಸಿಬ್ಬಂದಿಯವರು ಮಾಹಿತಿ ಕಲೆ ಹಾಕಿ ಪತ್ತೆ ಮಾಡಿ ಆರೋಪಿತಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಕಳವಾದ ರೂ. 10,000 ವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ನಗರದ ಲಾಡ್ಜ್ ನಲ್ಲಿ ತಂಗಿದ್ದು, ತೆಲುಗು ಮಾತನಾಡುವವರಾಗಿರುತ್ತಾರೆ. ಇವರುಗಳು ಪ್ರವಾಸಿ ಕೇಂದ್ರಗಳಲ್ಲಿ ಪಿಕ್ ಪಾಕೇಟ್, ಪರ್ಸ್/ವ್ಯಾನಿಟಿ ಬ್ಯಾಗ್, ಚಿನ್ನಾಭರಣ ಕಳವು ಮಾಡುವ ಪ್ರವೃತ್ತಿಯವರಾಗಿದ್ದು, ಇವರು ಮುಂಬರುವ ಕೃಷ್ಣ ಮಠದ ಪರ್ಯಾಯೋತ್ಸವ ಸಮಯದಲ್ಲಿ ಬೇರೆ ಬೇರೆ ರೀತಿಯ ಕಳವು ಮಾಡಲು ಸಂಚು ರೂಪಿಸಿರುವುದಾಗಿ ತಿಳಿದು ಬಂದಿದೆ.
ಇನ್ನು ಪ್ರಕರಣದ ಆರೋಪಿ ಪತ್ತೆ ಕಾರ್ಯಾಚರಣೆಯು ಪೊಲೀಸ್ ಅಧೀಕ್ಷಕರಾದ ಎನ್. ವಿಷ್ಣುವರ್ಧನ್, ಐ.ಪಿ.ಎಸ್, ಉಡುಪಿ ರವರ ಆದೇಶದಂತೆ, ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಸುಧಾಕರ ಸದಾನಂದ ನಾಯ್ಕ್, ಡಿವೈಎಸ್ಪಿ ಉಡುಪಿ ರವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪೊಲೀಸ್ ಉಪ-ನಿರೀಕ್ಷಕರಾದ ವಾಸಪ್ಪ ನಾಯ್ಕ್, ಪ್ರೋಬೇಷನರಿ ಪಿ.ಎಸ್.ಐ ರವರಾದ ಪ್ರಸಾದ, ಸುಹಾಸ್, ಎಎಸ್ಐ ವಿಜಯ್, ಸಿಬ್ಬಂದಿಯವರಾದ ಜೀವನ್ ಕುಮಾರ್, ಸತೀಶ್, ಲೋಕೇಶ್, ಆಶಾಲತಾ, ರೂಪ, ಸಂತೋಷ್ ರಾಠೋಡ್, ಬಾಲಕೃಷ್ಣ, ಶ್ರೀಮತಿ ಸುಷ್ಮ, ರಿಯಾಜ್ ಅಹ್ಮದ್, ಕಾರ್ತಿಕ್, ಗಂಗಾಧರಪ್ಪ ರವರು ರವರು ಪಾಲ್ಗೊಂಡಿದ್ದಾರೆ.