ಬಂಟ್ವಾಳ, ಜ 15 (DaijiworldNews/HR): ಬಿ.ಸಿ.ರೋಡಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2 ನೇ ಶಾಖೆಯು ಜ.17 ರಂದು ಮಾಣಿ ಜಂಕ್ಷನ್ನ 'ಪದ್ಮ ಮಾಲ್' ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಈ ಕುರಿತು ಮಾಹಿತಿ ನೀಡಿರುವ ಅವರು, ಸೂರಿಕುಮೇರು ಸೈಂಟ್ ಜೋಸೆಫ್ಚರ್ಚ್ನ ಧರ್ಮಗುರುಗಳಾದ ರೆ.ಫಾ. ಗ್ರೆಗರಿ ಪಿರೇರಾ ಮಾಣಿ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಾಣಿ ಶ್ರೀಉಳ್ಳಾಳ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಮಾಣಿಗುತ್ತು ಸಚಿನ್ ರೈ ಯವರು ಭಧ್ರತಾ ಕೊಠಡಿ ಉದ್ಘಾಟಿಸುವರು, ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ನಗದು ಕೌಂಟರ್ ಉದ್ಘಾಟಿಸುವರು. ಉದ್ಯಮಿ ಹಾಜಿ ಮಹಮ್ಮದ್ ರಫೀಕ್ ಗಣಕೀಕರಣ ಉದ್ಘಾಟಿಸುವರು ಎಂದು ಅವರು ತಿಳಿಸಿದರು. ಎಲ್ಲಾ ಸಮುದಾಯದವರಿಗೂ ನಮ್ಮ ಬ್ಯಾಂಕಿನಲ್ಲಿ ಉತ್ತಮ ಸೇವೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧೆಡೆ ಶಾಖೆ ತೆರೆಯುವ ಉದ್ದೇಶ ಇರಿಸಿಕೊಂಡಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಮಾಯಿಲಪ್ಪ ಸಾಲಿಯಾನ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಬಿ ಕುಂದರ್, ವ್ಯವಸ್ಥಾಪಕರಾದ ಶೈಲೇಶ್ ಕುಮಾರ್ ಕಕ್ಯಪದವು, ನಿರ್ದೇಶಕರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಮ್. ಎಸ್ ಮಹಮ್ಮದ್, ಬಿ.ಎಮ್.ಅಬ್ಬಾಸ್ ಅಲಿ, ನಾರಾಯಣ ನಾಯ್ಕ, ಅಮ್ಮು ಅರ್ಬಿಗುಡ್ಡೆ , ಬಿ.ಸಿ.ರೋಡು ಶಾಖಾ ವ್ಯವಸ್ಥಾಪಕಿ ಕಾವ್ಯಶ್ರೀ ಉಪಸ್ಥಿತರಿದ್ದರು.