ಕಾರ್ಕಳ, ಜ 15 (DaijiworldNews/HR): ದಂಪತಿಗಳ ನಡುವೆ ಹಣಕಾಸಿಗೆ ಸಂಬಂಧಿತ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಪತಿ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಬೆಳ್ಮಣ್ ಪವಿತ್ರ ನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಲೋರೆನ್ಸ್ ರೋಶನ್ ಲೋಬೋ(35) ಎಂದು ಗುರುತಿಸಲಾಗಿದೆ.
ಲೋರೆನ್ಸ್ ರೋಶನ್ ಲೋಬೋ ಅವರು ಎರಡನೇ ಪತ್ನಿ ರಾಣಿ ಸುನಿಲ್ ದಾಸ್ ಹಾಗೂ 7 ತಿಂಗಳ ಮಗುವಿನೊಂದಿಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಪವಿತ್ರನಗರ ಎಂಬಲ್ಲಿ ವಾಸವಿದ್ದು, ದಂಪತಿಯ ನಡುವೆ ಅಗ್ಗಿಂದಾಗೆ ಹಣದ ವಿಚಾರದಲ್ಲಿ ಜಗಳ ಏರ್ಪಡುತ್ತಿತ್ತೆನ್ನಲಾಗಿದೆ.
ಇನ್ನು ಪತ್ನಿ ರಾಣಿ ಸುನಿಲ್ ದಾಸ್ ಅವರು ಲೋರೇನ್ಸ್ ರೋಶನ್ ಲೋಬೋರವರಿಗೆ ಹಣದ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದರೆಂಬ ಆರೋಪವು ಕೇಳಿಬಂದಿದ್ದು, ಅದೇ ಕಾರಣದಿಂದ ಮನನೊಂದ ಲೋರೇನ್ಸ್ ರೋಶನ್ ಲೋಬೋ ಮನೆಯ ಮುಂಭಾಗದ ಖಾಸಗಿ ಜಾಗದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಲೋರೆನ್ಸ್ ರೋಶನ್ ಲೋಬೋ ಸಹೋದರಿ ರೇಶ್ಮಾ ನೀಡಿದ ದೂರಿನನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821