ಕಾರ್ಕಳ, ಜ 15 (DaijiworldNews/HR): ಬೀಗ ಜಡಿದಿದ್ದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಬೆಲೆಬಾಳುವ ಸೊತ್ತುಗಳನ್ನು ಕಳವು ಗೈದಿರುವ ಘಟನೆ ಎರ್ಲಪ್ಪಾಡಿ ಜಾರ್ಕಳ ಎಂಬಲ್ಲಿ ನಡೆದಿದೆ.
ಎರ್ಪಪ್ಪಾಡಿ ಜಾರ್ಕಳದ ವಿಜೇಂದ್ರ ನಾಯಕ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ಜನವರಿ 10ರ ರಿಂದ ಜನವರಿ 14ರ ನಡುವೆ ಈ ಕೃತ್ಯ ನಡೆದಿದ್ದು, ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಮನೆಯ ಒಳಪ್ರವೇಶಿಸಿದ ಕಳ್ಳರು ಈ ಕೃತ್ಯ ವೆಸಗಿದ್ದಾರೆ.
ಮನೆಯೊಳಗಿನ ಬೆಡ್ ರೂಮಿನ ಬಾಗಿಲಿನ ಬೀಗವನ್ನು ಮುರಿದು ಕೋಣೆಗೆ ಪ್ರವೇಶಿಸಿ ಕೋಣೆಯಲ್ಲಿರುವ ಕಪಾಟನ್ನು ತೆರೆದು ಕಪಾಟಿನಲ್ಲಿರಿಸಿದ್ದ ಸುಮಾರು ರೂ. 35000 ಮೌಲ್ಯದ ಸುಮಾರು 850 ಗ್ರಾಂ ತೂಕದ ಬೆಳ್ಳಿ ಸೊತ್ತುಗಳನ್ನು ಹಾಗೂ ಕಪಾಟಿನಲ್ಲಿದ್ದ ಸುಮಾರು ರೂ. 5000 ರೂಪಾಯಿ ಮೌಲ್ಯದ ಕೈಗಡಿಯಾರವನ್ನು ಕಳವು ಮಾಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕೇಸುದಾಖಲಾಗಿದೆ.