ಮಂಗಳೂರು, ಜ 15 (DaijiworldNews/HR): ಮಂಗಳೂರು ವಕೀಲರ ಸಂಘದ ಸದಸ್ಯರು ಹಿರಿಯ ವಕೀಲರು ಹಾಗೂ ನೋಟರಿ ಎಂ.ಜಗನಾಥ್(89) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಕೇಂದ್ರದ ಮಾಜಿ ಸಚಿವ, ವಕೀಲರಾದ ಜನಾರ್ಧನ ಪೂಜಾರಿಯವರಿಗೆ ವಕೀಲಿಕೆಯಲ್ಲಿ ಪ್ರಥಮ ಶಿಷ್ಯರಾಗಿದ್ದ ಜಗನ್ನಾಥ ಅವರು, ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಜನಾರ್ದನ ಪೂಜಾರಿಯವರ ಕಚೇರಿಯಲ್ಲಿ ಇತ್ತೀಚಿನ ದಿನಗಳವರೆಗೂ ಕರ್ತವ್ಯ ನಿರ್ವಹಿಸಿದ್ದ ಅವರು ಕಳೆದ ಕೆಲ ದಿನಗಳಿಂದ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು.
ಇನ್ನು ಅವರ ಕುಟುಂಬವರ್ಗಕ್ಕೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಂಗಳೂರು ವಕೀಲರ ಸಂಘ ಸಂತಾಪ ಸೂಚಿಸಿದೆ.