ಉಡುಪಿ, ಜ 15 (DaijiworldNews/MS): ಹಿಂದಿನ ಎರಡು ವರ್ಷದಲ್ಲಿ ದೀರ್ಘಾವಧಿಯ ಲಾಕ್ ಡೌನ್ , ನಿರ್ಬಂಧಿತ ಸಮಯ ಹಾಗೂ ವಾರಾಂತ್ಯ ಲಾಕ್ ಡೌನ್ ನಿಂದ ದಿನಗೂಲಿ ನೌಕರರಂತೆ ದುಡಿಯುವ ಕ್ಷೌರಿಕರು ಈಗಾಗಲೇ ಆರ್ಥಿಕ ಸಂಕಷ್ಟಕ್ಜೆ ಸಿಲುಕಿದ್ದಾರೆ.
ಇದೀಗ ಮತ್ತೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿ ವಾರವಿಡಿ ವ್ಯವಹಾರ ಇಲ್ಲದೆ, ಒಂದಿಷ್ಟಾದರೂ ಗ್ರಾಹಕರು ಬರುವ ವಾರಾಂತ್ಯದಲ್ಲಿ ಕರ್ಪ್ಯೂ ಜಾರಿಗೊಳಿಸಿ, ಬಂದ್ ಮಾಡಿ ಮನೆಯಲ್ಲಿ ಇರುವ ಹಾಗೆ ಮಾಡಿದ ಸರಕಾರದ ಕ್ರಮ ವನ್ನು ಉಡುಪಿ ಜಿಲ್ಲಾ ಸವಿತಾ ಸಮಾಜ ವಿರೋಧಿಸಿ ಅವೈಜ್ಞಾನಿಕ ವಾರಾಂತ್ಯ ಕರ್ಫ್ಯೂ ನಿಂದ ಸಲೂನ್ ಪಾರ್ಲರ್ ಗಳಿಗೆ ವಿನಾಯತಿ ನೀಡಬೇಕೆಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಇವರಿಗೆ ಉಡುಪಿ ಜಿಲ್ಲಾ ಸವಿತಾ ಸಮಾಜದ ನಿಯೋಗವು ಮನವಿ ನೀಡಿದೆ.
ನಿಯೋಗದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾದ ವಿಶ್ವನಾಥ್ ಭಂಡಾರಿ ನಿಂಜೂರು, ಪ್ರ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್ ಆದಿಉಡುಪಿ,ಬನ್ನಂಜೆ ಗೋವಿಂದ ಭಂಡಾರಿ ಗೌರವಾಧ್ಯಕ್ಷರು , ಉಡುಪಿ ತಾಲೂಕ್ ಸವಿತಾ ಸಮಾಜದ ಅಧ್ಯಕ್ಷ ರಾದ ರಾಜು ಭಂಡಾರಿ ಕಿನ್ನಿಮೂಲ್ಕಿ ಉಪಸ್ಥಿತರಿದ್ದರು.