ಮಂಗಳೂರು, ಜ 15 (DaijiworldNews/MS): ಮಾನಸಿಕ, ದೈಹಿಕ ಹಿಂಸೆ ನೀಡಿ ಜೀವಬೆದರಿಕೆ ಹಾಗೂ ವರದಕ್ಷೆಣೆ ಕಿರುಕುಳ ಕೊಟ್ಟಿರುವ ಬಗ್ಗೆ ಮಹಿಳೆಯೊಬ್ಬರು ತನ್ನ ಪತಿ ವಿರುದ್ದ ದೂರು ಸಲ್ಲಿಸಿದ್ದಾರೆ.
ಪತಿ ಬಿ.ಸಿ ರೋಡ್ ನ ಮಹಮ್ಮದ್ ಮುಸ್ತಾಫ್ ವಿರುದ್ದ ಆತನ ಪತ್ನಿ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮದುವೆ ಸಮಯದಲ್ಲಿ ಉಡುಗೊರೆಯಾಗಿ ಬಂಗಾರದ ಒಡವೆಗಳನ್ನು ತವರು ಮನೆಯಿಂದ ನೀಡಿದ್ದಾರೆ. ಮದುವೆ ಅನಂತರ ಪತಿ ಮಹಮ್ಮದ್ ಮುಸ್ತಾಫ್ " ನೀನು ೩೦ ಪವನ್ ಬಂಗಾರ ತಂದಿದ್ದು, ಇನ್ನೂ ಇಪ್ಪತ್ತು ಪವನ್ ಬಂಗಾರವನ್ನು ತವರು ಮನೆಯಿಂದ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಲು ಆರಂಭಿಸಿದ್ದಾರೆ. ಅನಂತರ ನಿನಗೆ ಬೇರೆಯವರ ಜತೆ ಅನೈತಿಕ ಸಂಬಂಧವಿದೆ ನೀನು ನನಗೆ ಬೇಡ ನಿನಗೆ ತಲಾಖ್ ಕೊಡುತ್ತೇನೆ ಎಂಬುವುದಾಗಿ ಮಾನಸಿಕ ದೈಹಿಕ ಹಿಂಸೆ ನೀಡಿದ್ದಾನೆ. ಆತ ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗುವವರೆಗೂ ಕುಲ್ಲು ಎಂಬಾತನ ಜತೆ ಸೇರಿ ಮಾನಸಿಕ ಹಿಂಸೆ ನೀಡಿ ಜೀವಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.