ಮಂಗಳೂರು, ಜ 14 (DaijiworldNews/HR): ಮಿರಾಕಲ್ಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಷನ್ ಆಯೋಜಿಸಿದ್ದ ಸೆಲ್ಪಿ ವಿದ್ ಕ್ರಿಸ್ಮಸ್ ಕ್ರಿಬ್ ಸ್ಪರ್ಧೆಯಲ್ಲಿ 102 ಸ್ಪರ್ಥಿಗಳು ಭಾಗವಹಿಸಿದ್ದು, ವಿಜೇತರಾದವರಿಗೆ ಬಹುಮಾನ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಇಂದು ನಡೆಯಿತು.
ಈ ವೇಳೆ ರೋಶನಿ ನಿಲಯದ ಪ್ರಾಂಶುಪಾಲರಾದ ಡಾ. ಜ್ಯೂಲಿಯಟ್ ಮಾತನಾಡಿ, ಸಂಸ್ಥೆಯ ಬೆಳವಣಿಗೆ ಮತ್ತು ಸಮಾಜಮುಖಿ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ ಪಡಿಸಿ ವಿಜೇತರನ್ನು ಅಭಿನಂದಿಸಿ, ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ನ ಇಮಿಡಿಯೆಟ್ ಪಾಸ್ಟ್ ಗವರ್ನರ್ ಡಾ. ಗೀತ್ ಪ್ರಕಾಶ್ ಮಾತನಾಡಿ, "ಸಂಸ್ಥೆಯು ಉತ ಮ ಸೇವೆಯನ್ನು ನೀಡುತ್ತಿದ್ದು, ಬಡ ಜನರಿಗೂ ಸಾಲ ಸಿಗುವಂತಹ ಅವಕಾಶ ನೀಡುತ್ತಿದೆ. ಮಿರಾಕಲ್ಸ್ ಸಂಸ್ಥೆಯ ಸಾಧನೆ ಮೆಚ್ಚುವಂತದ್ದು ಮತ್ತು ಈ ಸಂಸ್ಥೆಯು ಎಲ್ಲಾ ಸಹಕಾರಿ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಖಾ ವ್ಯವಸ್ಥಾಪಕರಾದ ಮಮತಾ ರೆಬೆಲ್ಲೊ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿ, ವ್ಯವಸ್ಥಾಪಕ ನಿದೇಶಕರು ಸಂಸ್ಥೆಯ ಕುರಿತಾಗಿ ಮಾತನಾಡಿದರು.
ಪ್ರಥಮ ಸ್ಥಾನ ಪಡೆದ ಅರ್ಥುರ್ ಪಸ್ಕಲ್ ಡಿಸೋಜ (ಬೆಂದೂರ್ ಪ್ಯಾರಿಶ್), ದ್ವಿತಿಯ ಸ್ಥಾನ ಪಡೆದ ಸನತ್ ಜೋಯ್ ಡಿಸೋಜ (ಪನೀರ್ ಪ್ಯಾರಿಶ್) ಹಾಗೂ ಸಮಧಾನಕರ ಬಹುಮಾನ ವಿಜೇತರನ್ನು ಗೌರವಿಸಿ ಅಭಿಸಂದಿಸಲಾಯಿತು.
ಕಾರ್ಯಕ್ರಮದಲ್ಲಿ ಫಾದರ್ ವಿಲಿಯಮ್ ಬೊರಾಕಸ್, ರೋಶನಿ ನಿಲಯದ ಪ್ರಿನ್ಸಿಪಲ್ ಡಾ. ಜ್ಯೂಲಿಯಟ್, ಎ. ಲೇಡಿ ಆಫ್ ಮಿರಾಕಲ್ಸ್ ಪ್ಯಾರಿಶ್ನ ಫಾದರ್ ಐವನ್ ಅಶ್ವಿನ್ ಡಿಸೋಜ, ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ನ ಇಮಿಡಿಯೆಟ್ ಪಾಸ್ಟ್ ಗವರ್ನರ್ ಡಾ. ಗೀತ್ ಪ್ರಕಾಶ್, ದೈಜಿವರ್ಲ್ಡ್ನ ಮಾರ್ಕೆಟಿಂಗ್ ಮ್ಯಾನೇಜರ್ ಪ್ರವೀಣ್ ತಾವ್ರೋ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮೊಹಮ್ಮದ್ ಇಕ್ಬಾಲ್ ಶೇಕ್ ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.
ಸಂಸ್ಥೆಯ ಸಿಬ್ಬಂಧಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿ, ಜೆರೋಮ್ ವಂದಿಸಿದರು.