ಕಾಸರಗೋಡು, ಜ 14 (DaijiworldNews/MS): ಪೊಲೀಸರು ಮತ್ತು ನಾರ್ಕೊಟಿಕ್ ಸೆಲ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 16 ಕಿಲೋ ಗಾಂಜಾ ಸಹಿತ ಮೂವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಎರಡು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರ ಕುಂಜತ್ತೂರುನಲ್ಲಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 4 ಕಿಲೋ ಗಾಂಜಾ ವನ್ನು ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ ಹಾಗೂ ನಾರ್ಕೊ ಟಿಕ್ ಸೆಲ್ ಡಿವೈಎಸ್ಪಿ ಎಂ. ಎ ಮ್ಯಾಥ್ಯೂ ನೇತೃತ್ವದ ಪೊಲೀಸ್ ತಂಡ ವಶಪಡಿಸಿ ಕೊಂಡಿದ್ದು, ಕುಂಜತ್ತೂರು ಜಿ ಎಚ್ ಎಸ್ ಎಸ್ ಶಾಲಾ ರಸ್ತೆಯ ಯಾಸಿನ್ ಇಮ್ರಾನ್ (33) ಎಂಬಾತನನ್ನು ಬಂಧಿಸಿದ್ದಾರೆ.
ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಯಾರಿ ನಲ್ಲಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 12 ಕಿಲೋ ಗಾಂಜಾ ವನ್ನು ನಾರ್ಕೋ ಟಿಕ್ ಸೆಲ್ ಸಿಬಂದಿಗಳು ಹಾಗೂ ಆದೂರು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು, ಅಜನೂರು ಕೊಡಂಕೋಡು ಮಡಗರದ ಅಹಮ್ಮದ್ ಕಬೀರ್ (32)ಅಬ್ದುಲ್ ರಹಮಾನ್ ಸಫ್ವಾನ್(23) ಎಂಬಾತನನ್ನು ಬಂಧಿಸಲಾಗಿದೆ.