ಕಾಸರಗೋಡು, ಜ. 13 (DaijiworldNews/SM): ಮಿಕ್ಸರ್ ಗ್ರೈಂಡರ್ ನಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಕುಂಬಳೆ ನಿವಾಸಿಯಿಂದ 68 ಲಕ್ಷ ರೂ . ಮೌಲ್ಯದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ಕಣ್ಣೂರು ವಿಮಾನ ನಿಲ್ದಾಣದಿಂದ ವಶಪಡಿಸಿಕೊಂಡಿದ್ದಾರೆ.
ಕುಂಬಳೆ ಮೊಗ್ರಾಲ್ ಕೆ .ಕೆ ಪುರದ ಮೊಯಿದಿನ್ ಕುಂಞ ನನ್ನು ಕಸ್ಟಡಿಗೆ ಪಡೆಯಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನ ಬಳಿಯಿಂದ ಸಾಮಾಗ್ರಿಗಳನ್ನು ತಪಾಸಣೆ ನಡೆಸಿದಾಗ ಗ್ರೈಂಡರ್ ನಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ಚಿನ್ನಾಭರಣ ಪತ್ತೆಯಾಗಿದೆ.