ಕಾಸರಗೋಡು, ಜ 13 (DaijiworldNews/PY): ಜಿಲ್ಲೆಯಲ್ಲಿ ಗುರುವಾರ 186 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈವರೆಗೆ 1,45,158 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 59 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 1,42,753 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ
ಸದ್ಯ 1,130 ಮಂದಿ ಚಿಕಿತ್ಸೆಯಲ್ಲಿದ್ದು, 6,142 ಮಂದಿ ನಿಗಾದಲ್ಲಿದ್ದಾರೆ. ಮೃತರ ಸಂಖ್ಯೆ ಮೃತಪಟ್ಟವರ ಸಂಖ್ಯೆ 914 ಕ್ಕೆ ತಲುಪಿದೆ.
ಜಿಲ್ಲೆಯಲ್ಲಿ ಏಳು ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.