ಬೆಳ್ತಂಗಡಿ, ಜ 13 (DaijiworldNews/MS): ವ್ಯಕ್ತಿಯೋರ್ವರನ್ನು ಮಾರಕಾಯುಧದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಅವಿವಾಹಿತರಾಗಿರುವ, ಕೃಷಿಕ ಮತ್ತು ಎಲ್ಐಸಿ ಪ್ರತಿನಿಧಿ ಶಾಂತಪ್ಪ ಗೌಡ ದೇವಸ್ಯ(40) ಎಂದು ಗುರುತಿಸಲಾಗಿದೆ.
ಜಮೀನು ವಿಚಾರವಾಗಿ ಕೊಲೆ ನಡೆದಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ