ಮಂಗಳೂರು, ಜ 13 (DaijiworldNews/PY): ಮೊಬೈಲ್ ಕಸಿದು ಪರಾರಿಗೆ ಯತ್ನಿಸಿದ ವ್ಯಕ್ತಿಯನ್ನು ಬೆನ್ನಟ್ಟಿ ಪೊಲೀಸರು ಹಿಡಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಶಮಂತ್ (20) ಎಂದು ಗುರುತಿಸಲಾಗಿದೆ.
ವಿಚಾರಣೆಯ ನಡೆಸಿದ ಸಂದರ್ಭ ತಂಡದಲ್ಲಿ 4-5 ಮಂದಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ.
ನೆಹರೂ ಮೈದಾನಲ್ಲಿ ಮಲಗಿದ್ದ ವ್ಯಕ್ತಿಯ ಮೊಬೈಲ್ ಕದ್ದು ಪರಾರಿಗೆ ಯತ್ನಿಸುತ್ತಿದ್ದ ನೀರುಮಾರ್ಗದ ಹರೀಶ್ ಪೂಜಾರಿ (32) ಎಂಬಾತನನ್ನು ಬೆನ್ನಟ್ಟಿದ್ದು ಆತನನ್ನು ವಶಕ್ಕೆ ಪಡೆದಿದ್ದರು, ಈ ವೇಳೆ ಮತ್ತೋರ್ವ ಆರೋಪಿ ರಾಜೇಶ್ ಪರಾರಿಯಾಗಿದ್ದಾನೆ.
ಕಳ್ಳರನ್ನು ಯಶಸ್ವಿಯಾಗಿ ಹಿಡಿದ ಪೊಲೀಸ್ ಅಧಿಕಾರಿ ವರುಣ್ ಆಳ್ವ ಅವರನ್ನು ಪುರಸ್ಕರಿಸಿ ಸನ್ಮಾನಿಸುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.