ಕಾರ್ಕಳ, ಜ 12 (DaijiworldNews/HR): ತುಂಬುಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ 108 ಆಂಬ್ಯುಲೆನ್ಸ್ನಲ್ಲಿ ಜನ್ಮ ನೀಡಿರುವ ಘಟನೆ ಜೋಡುರಸ್ತೆ ಎಂಬಲ್ಲಿ ನಡೆದಿದೆ.
ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮಹಿಳೆ ವನಿತಾ ಮಗುವಿಗೆ ಜನ್ಮ ನೀಡಿದ ಬಾಣಂತಿ.
ಅಂಬುಲೆನ್ಸ್ನ ಇಎಂಟಿ ರಾಧಾಮಣಿ ಜಿ.ಕೆ ಹಾಗೂ ಅಂಬುಲೆನ್ಸ್ನ ಪೈಲಟ್ ಪುಂಡಲೀಕ ಅವರಿಬ್ಬರು ಮಹಿಳೆಯ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ನೆರವಾದವರು.
ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗು ಆರೋಗ್ಯಪೂರ್ಣರಾಗಿದ್ದಾರೆ ಎಂದು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೆ.ಎಸ್.ರಾವ್ ವಿವರಿಸಿದ್ದಾರೆ.