ಉಡುಪಿ, ಜ 12 (DaijiworldNews/HR): ಅಕ್ರಮವಾಗಿ ಗಾಂಜಾ ಹಾಗೂ ಹಶೀಶ್ ತೈಲ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿರುವ ಘಟನೆ ಶಿವಳ್ಳಿ ಗ್ರಾಮದ ಪೆರಂಪಳ್ಳಿ ರೈಲ್ವೇ ಸೇತುವೆ ಬಳಿ ನಡೆದಿದೆ.
ಬಂಧಿತ ಆರೋಪಿಗಳನ್ನು ಕಲ್ಯಾಣಪುರದ ಗ್ಲಾಡೆನ್ ಕ್ಲೆವಿನ್ ರೋಡ್ರಿಗಸ್ (21) ಮತ್ತು ಅಂಬಾಗಿಲುವಿನ ಪಡು ಪೆರಂಬಳ್ಳಿಯ ಹೃತಿಕ್ ಕೆಎಂ (21) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ 93 ಗ್ರಾಂ ಗಾಂಜಾ, ಹಶೀಶ್ ತೈಲ ಹಾಗೂ 7 ಸಾವಿರ ಮೌಲ್ಯದ ಮೊಬೈಲ್ ಫೋನ್, ಹಶೀಶ್ ತೈಲ ತುಂಬಲು ಬಳಸುತ್ತಿದ್ದ ಸಣ್ಣ ಬಾಟಲಿಗಳು ಹಾಗೂ ಹೋಂಡಾ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಐಪಿಸಿಯ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.