ಬೆಳ್ತಂಗಡಿ, ಜ 12 (DaijiworldNews/HR): ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕಳಂಜಿಬೈಲ್ ನಿವಾಸಿ ನಾಸಿರ್ ಅಲಿಯಾಸ್ ಸುನಾಮಿ ಎಂದು ಗುರುತಿಸಲಾಗಿದೆ.
ಈ ಕುರಿತು ಬಾಲಕಿಯ ತಾಯಿ ದೂರು ನೀಡಿದ್ದು, ಜನವರಿ 6ರಂದು ಬಾಲಕಿ ಮನೆಯ ಹೊರಗೆ ನಿಂತಿದ್ದ ವೇಳೆ ಆರೋಪಿಯು ಆಕೆಗೆ 500ರೂ. ಹಾಗೂ ಮೊಬೈಲ್ ಪೋನ್ ನೀಡಿ ಲೈಂಗಿಕ ಕಿರುಕುಳ ನೀಡಿದ್ದು, ಈ ವೇಳೆ ನಾನು ಅಲ್ಲಿಗೆ ಬಂದಾಗ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ , ಮಗಳನ್ನು ಮದುವೆ ಮಾಡಿ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಘಟನೆ ನಡೆದು ಎರಡು ದಿನದ ಬಳಿಕ ಮಹಿಳೆ ಬಾತ್ ರೂಂಗೆ ಹೋಗಿದ್ದ ವೇಳೆ ಬಾತ್ ರೂಂ ಕಿಟಕಿಯ ಮೂಲಕ ಯಾರೋ ನಿಂತು ವಿಡಿಯೋ ಮಾಡುತ್ತಿರುವುದು ಕಂಡುಬಂದಿದ್ದು, ಇದನ್ನು ಕಂಡ ಮಹಿಳೆ ಕಿರುಚಿದಾಗ ಆರೋಪಿ ನಾಸಿರ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಹಿಳೆಯು ನೀಡಿರುವ ದೂರಿನ ಅನ್ವಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.