ಮಂಗಳೂರು, ಜ 12 (DaijiworldNews/MS): ಇನ್ ಸ್ಟೆಂಟ್ ಆಗಿ ಸಿಗುವ ಸಣ್ಣ ಸಾಲದ ಮೋಹಕ್ಕೆ ಬಿದ್ದು ಮೊಬೈಲ್ ಆ್ಯಪ್ ಲೋನ್ ಪಡೆದು, ಬಳಿಕ ಅನಿಯಂತ್ರಿತ ಬಡ್ಡಿ, ಗೌಪ್ಯ ಶುಲ್ಕಗಳ ನೆಪದಲ್ಲಿ ಬದುಕನ್ನೇ ಹಿಂಡಿ ಹಿಪ್ಪೆ ಮಾಡುವ ಮೊಬೈಲ್ ಆ್ಯಪ್ ಲೋನ್ ಗಳ ಸಾಲದ ಮೋಹಕ್ಕೆ ಬೀಳಬೇಡಿ ಎಂದು ಪೊಲೀಸ್ ಇಲಾಖೆ ಯುವಕರಿಗೆ ಎಚ್ಚರಿಕೆ ನೀಡಿದೆ.
ಯುವಕರನ್ನು ಬಲಿ ಪಡೆದ ಲೋನ್ ಆ್ಯಪ್
ಲೋನ್ ಆ್ಯಪ್ ನ ಟ್ರ್ಯಾಪ್ ಗೆ ಒಳಗಾಗಿ ಕರಾವಳಿಯಲ್ಲಿ ಇಬ್ಬರು ಯುವಕರು ಪ್ರಾಣತೆತ್ತಿದ್ದಾರೆ. ಕಿನ್ನಿಗೋಳಿಯ ಪಕ್ಷಿಕೆರೆಯ ನಿವಾಸಿ ಸುಶಾಂತ್ (26) ಜ.10 ರಂದು ಹಾಗೂ ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ವಿಘ್ನೇಶ್(25) ಡಿ.30 ರಂದು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದರು. ಇಬ್ಬರ ಡೆತ್ ನೋಟ್ ನಲ್ಲಿ ಆನ್ ಲೈನ್ ಲೋನ್ ಬಗ್ಗೆ ಉಲ್ಲೇಖಿಸಿದ್ದರು.
ಏನಿದು ಲೋನ್ ಆ್ಯಪ್ ?
ಲೋನ್ ಆ್ಯಪ್ ಪ್ರಾರಂಭದಲ್ಲಿ ಚೀನಾದಲ್ಲಿ ಆರಂಭವಾಗಿದ್ದು. ನ್ಯೂಯ್ಡ್ ಲೋನ್ ಆ್ಯಪ್ ಎನ್ನುವ ಆ್ಯಪ್ ಕೂಡ ಚಾಲನೆಯಲ್ಲಿತ್ತು. ಅಂದರೆ ಈ ಆ್ಯಪ್ ನ್ನು ಇನ್ಸ್ಟಲ್ ಮಾಡುವಾಗ ನಗ್ನ ಪೋಟೋವನ್ನು ಪಡೆಯುತ್ತಿದ್ದು ಒ೦ದು ವೇಳೆ ಸರಿಯಾಗಿ ಲೋನ್ ಕಟ್ಟದಿದ್ದರೆ ನಗ್ನ ಪೋಟೋ ಬೇರೆಯವರಿಗೆ ಕಳುಹಿಸುವುದಾಗಿಯೂ ಹೆದರಿಸುತ್ತಿದ್ದರು.
ಭಾರತದಲ್ಲಿ ಸುಮಾರು 600ಕ್ಕಿಂತ ಹೆಚ್ಚು ಲೋನ್ ಆ್ಯಪ್ ಇದ್ದು ಇವುಗಳಗೆ ಯಾವುದೇ ಆರ್ಬಿಐ ನಿಂದ ಮಾನ್ಯತೆ ಇರುವುದಿಲ್ಲ. ಇವುಗಳು ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ ಮಾಡುವಂತ ಆ್ಯಪ್ ಆಗಿದ್ದು ಇನ್ಫ್ಟಲ್ ಮಾಡುವಾಗ ಅನೇಕ ಅನುಮತಿಯನ್ನು ಕೇಳುತ್ತಾರೆ. ಉದಾಹರಣೆಗೆ ಕಾಂಟಾಕ್ಟ್, ವಿಡಿಯೋ ಪೋಟೋ ಕ್ಯಾಮಾರ ಇತ್ಯಾದಿಗಳ ಅನುಮತಿಯನ್ನು ಕೇಳುತ್ತಾರೆ. ಎಲ್ಲಾದಕ್ಕೂ ಎಸ್ ಎಸ್ ಹಾಕಿ ಇನ್ಸಸ್ಟಾಲ್ ಮಾಡಿದ ನಂತರ ಸಣ್ಣ ಪ್ರಮಾಣದ ಸಾಲ ಅಂದರೆ ರೂ. 3000/- ಅಥವಾ 5000/- ಹಣ ನೀಡುತ್ತಾರೆ.
ನಂತರ ಸಾಲವನ್ನು ಹಿಂತಿರುಗಿಸುವಾಗ ಶೇಕಡಾ 30 ರಿಂದ 60ರಷ್ಟು ಬಡ್ಡಿಯನ್ನು ವಿಧಿಸಿ ಸಾಲ ಚುಕ್ತಾ ಮಾಡಲು ಹೇಳುತ್ತಾರೆ. ಒಂದು ವೇಳೆ ಸಾಲವನ್ನು ಹಿಂದುರಿಗಿಸಲು ಸಾಧ್ಯವಾಗದಿದ್ದಲ್ಲಿ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿ ಲೋನ್ ಪಡೆದ ಬಗ್ಗೆ ಹೇಳುವುದಾಗಿಯೂ, ಯಾವುದಾದರೂ ಪೋಟೋ ವಿಡಿಯೋ ಇದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಾಜಿಗಿಡುವುದರ ಬಗ್ಗೆ ಹೆದರಿಸುತ್ತಾರೆ. ಇದಲ್ಲದೆ ಕ್ರೇಡಿಟ್ ರೇಟ್ ಕಡಿಮೆಯಾಗುತ್ತದೆ, ನಿಮ್ಮ ಮೇಲೆ 42೦, ಚೀಟಿಂಗ್ ಕೇಸ್ ಬುಕ್ ಮಾಡುವುದಾಗಿ ಹೇಳುತ್ತಾರೆ. ಕೆಲವೊಮ್ಮೆ ಪ್ರಕರಣ ದಾಖಲಾಗಿವೆ ಎಂದು ಹೇಳಿ ನಕಲಿ ಎಫ್ಐಆರ್ಯನ್ನು ಕಳುಹಿಸುತ್ತಾರೆ. ಇದಲ್ಲದೆ ನಿಮಗೆ ಇನ್ನು ಮುಂದೆ ಯಾವುದೇ ಬ್ಯಾಂಕಿನ ಸಾಲ ಸಿಗುವುದಿಲ್ಲ ಎಂದು ಬೆದರಿಸುತ್ತಾರೆ.
ಸಾರ್ವಜನಿಕರು ಇಂತಹ ಲೋನ್ ಆ್ಯಪ್ ನ್ನು ಡೌನ್ಲೋಡ್ ಮಾಡಬಾರದು ಇತರೆ ಯಾವುದೇ ಆ್ಯಪ್ ಡೌನ್ಲೋಡ್ ಮಾಡಿದರೂ ಕೂಡ ನಿಮ್ಮ ಮೊಬೈಲ್ ಕಟ್ಯಾಂಕ್ಟ್, ವಿಡಿಯೋ ಪೋಟೋ ನೋಡಲು ಅನುಮತಿಯನ್ನು ನೀಡಬಾರದು. ಯಾವುದೇ ಲೋನ್ ಆ್ಯಪ್ ನ್ನು ಇನ್ ಸ್ಟಲ್ ಮಾಡುವಾಗ ಎಲ್ಲಾ 'ಟರ್ಮ್ಸ್ ಆ್ಯಂಡ್ ಕಂಡಿಷನ್ಸ್' ಒಪ್ಪಿ ಎಸ್ ಎಸ್ ಎಂದು ಎಲ್ಲಾದಕ್ಕೂ ಅನುಮತಿ ನೀಡಿ ತೊ೦ದರೆಯಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಅತ್ಯಂತ ಕಡಿಮೆ ಸಾಲವನ್ನು ನೀಡಿ ದುಬಾರಿ ಹಣವನ್ನು ಪಡೆಯುವುದು ಒಂದು ವೇಳೆ ಲೋನ್ ಕಟ್ಟದಿದ್ದಲ್ಲ ನಿಮ್ಮ ಮೊಬೈಲ್ನಲ್ಲಿರುವ ಎಲ್ಲಾ ಮಾಹಿತಿಯನ್ನು ಇಟ್ಟುಕೊಂಡು ಹೆದರಿಸುವ ಮತ್ತು ಬ್ಲಾಕ್ಮೇಲ್ ಮಾಡಿ ಹಣವನ್ನು ವಸೂಲು ಮಾಡುತ್ತಿದ್ದುಸಾರ್ವಜನಿಕರು ಜಾಗ್ರತೆ ವಹಿಸಬೇಕಾಗಿದೆ.