ಉಡುಪಿ, ಜ.12 (DaijiworldNews/PY): ಯಾತ್ರಾರ್ಥಿಗಳಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಬೈಂದೂರು ತಾಲೂಕಿನ ಕೊಲ್ಲೂರಿನ ದಳಿ ಸಮೀಪ ನಡೆದಿದೆ.
ಬಸ್ ಉರುಳಿ ಬಿದ್ದ ಪರಿಣಾಮ ಗಾಯಗೊಂಡವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕೊಲ್ಲೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆದ್ಧಾರೆ.
ಘಟನೆಯ ಸಂಬಂಧ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.