ಬ್ರಹ್ಮಾವರ, ಜ 12 (DaijiworldNews/MS): ಗದ್ದೆ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಯೊಬ್ಬರು ಗದ್ದೆಗೆ ಬಿದ್ದು ಮೃತಪಟ್ಟ ಘಟನೆ ಜ.10ರಂದು ರಾತ್ರಿ ವೇಳೆ 33ನೇ ಶೀರೂರು ಗ್ರಾಮದ ಮರ್ಲಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಶೀರೂರು ಗ್ರಾಮದ ಮರ್ಲಾಡಿ ನಿವಾಸಿ ಅಶೋಕ ಶೆಟ್ಟಿ, (57) ಎಂದು ಗುರುತಿಸಲಾಗಿದೆ. ಇವರು ಮನೆ ಹತ್ತಿರದವರಿಗೆ ಹಾಲನ್ನು ಡೇರಿಗೆ ಕೊಡುವಂತೆ ಹೇಳಿ ಗಡಿಬಿಡಿಯಿಂದ ನಡೆದು ಬರುತ್ತಿರುವಾಗ ಈ ಘಟನೆ ನಡೆದಿದೆ
ಕೆಸರು ಜಾಗದಲ್ಲಿ ಮುಖ ಅಡಿಯಾಗಿ ಬಿದ್ದು ಉಸಿರುಗಟ್ಟಿ ಅಥವಾ ಹೃದಯಾಘಾತದಿಂದ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.