ಕೋಟ, ಜ. 11 (DaijiworldNews/SM): ಪುರಾಣ ಪ್ರಸಿದ್ಧ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಸೋಮವಾರ ಹಾಗೂ ಮಂಗಳವಾರ ಸಂಪನ್ನಗೊಂಡಿತು.
ಸೋಮವಾರ ರಾತ್ರಿ ಹಾಲಿಟ್ಟು ಸೇವೆ ಗೆಂಡೋತ್ಸವ ಕೋವಿಡ್ ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ನೆರವೇರಿತು. ಮಂಗಳವಾರ ಮುಂಜಾನೆ ವರ್ಷಂಪ್ರತಿಯಂತೆ ಢಕ್ಕೆ ಬಲಿ, ತುಲಾಭಾರ ಸೇವೆ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಉಪಸ್ಥಿತಿಯಲ್ಲಿ ನಡೆಯಿತು.
ಹರಕೆಯ ಗೆಂಡ ಹಾಗೂ ತುಲಾಭಾರ ಸೇವೆ :
ಶ್ರೀ ಕ್ಷೇತ್ರದಲ್ಲಿಪ್ರತಿವರ್ಷ ಭಕ್ತರು ನಾನಾ ರೀತಿಯ ಹರೆಕೆಯನ್ನು ಹೊತ್ತು ಶ್ರೀ ದೇವಳದಲ್ಲಿ ಬರುತ್ತಾರೆ ಅಂತಯೇ ಸಂತನಾ ಆಗದಿದ್ದವರು, ಅನಾರೋಗ್ಯ ಪೀಡಿತರು, ವ್ಯವಹಾರಿಕ ಕ್ಷೇತ್ರ ಹೀಗೆ ನಾನಾ ರೀತಿಯಲ್ಲಿ ಹರಕೆ ಹೊತ್ತು ಶ್ರೀ ಕ್ಷೇತ್ರದ ಜಾತ್ರಾ ಸಂದರ್ಭದಲ್ಲಿ ಹರಕೆ ಹೆಚ್ಚಾಗಿ ಇಡೇರಿಸಿಕೊಳ್ಳುತ್ತಾರೆ, ಈ ದಿಸೆಯಲ್ಲಿ ಬ್ರಹ್ಮಾವರ ಸಮೀಪದ ನಿಲಾವರ ಶ್ರೀ ರಕ್ಷಾ ಎನ್ನುವಾಕೆ ಹುಟ್ಟುವಾಗಲೇ ವಿಕಲಚೇತನ(ಬಲಗಾಲು ಅನಾರೋಗ್ಯಕ್ಕೆ ತುತ್ತಾಗಿರುವುದರಿಂದ ) ಅದು ಸರಿ ದೂಗಿದರೆ ಹಲವು ಮಕ್ಕಳ ತಾಯಿ ಕ್ಷೇತ್ರದಲ್ಲಿ ತುಲಾಭಾರ ಸೇವೆ ನೀಡುವೆ ಎಂಬಂತೆ ತನ್ನ ಕಾಲಿಗೆ ಫೈಬರ್ ಕೃತಕ ಕಾಲು ಜೋಡಿಸಿ ಯಶಸ್ವಿಯಾದ ಹಿನ್ನಲ್ಲೆಯಲ್ಲಿ ದೇವಳದಲ್ಲಿ ಹರಕೆಯನ್ನು ಸಂದಾಯಗೊಳಿಸಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರು,ಅರ್ಚಕ ಪ್ರತಿನಿಧಿಗಳು ಉಪಸ್ಥಿತರಿದ್ದರು.