ಕಾಸರಗೋಡು, ಜ 11 (DaijiworldNews/HR): ವರ್ಷದೊಳಗೆ ಒಂದು ಲಕ್ಷ ಉದ್ಯಮ ಘಟಕಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಕೇರಳ ಕೈಗಾರಿಕಾ ಸಚಿವ ಪಿ ರಾಜೀವ್ ಹೇಳಿದರು.
ಮಂಗಳವಾರ ಕಾಸರಗೋಡು ನಗರ ಸಭಾಂಗಣದಲ್ಲಿ ಮೀಟ್ ದಿ ಮಿನಿಸ್ಟರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "50 ಕೋಟಿ ರೂ. ತನಕದ ಹೂಡಿಕೆದಾರರ ಘಟಕಗಳಿಗೆ ಪರವಾನಿಗೆ ಅಗತ್ಯ ಇಲ್ಲ. 10 ಕೋಟಿ ರೂ.ನಿಂದ 50 ಕೋಟಿ ರೂ. ಗೆ ಏರಿಕೆ ಮಾಡಲಾಗಿದೆ. 50 ಕೋಟಿ ರೂ . ಗಿಂತ ಅಧಿಕ ಹೂಡಿಕೆ ದಾರರಿಗೆ ಎಲ್ಲಾ ದಾಖಲೆಗಳಿದ್ದಲ್ಲಿ ಒಂದುವಾರದೊಳಗೆ ಪರವಾನಿಗೆ ನೀಡಲಾಗುವುದು" ಎಂದರು.
ಮೀಟ್ ದಿ ಮಿನಿಸ್ಟರ್ ಎಲ್ಲಾ ಜಿಲ್ಲೆಗಳಲ್ಲೂ ನಡೆಸಲಾಗುತ್ತಿದ್ದು, ದೂರುಗಳಿಗೆ ಪರಿಹಾರ ಕಲ್ಪಿಸಲುಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷಾರಾಗಿರುವ ಸಮಿತಿಗೆ ರೂಪು ನೀಡಲಾಗಿದೆ ಎಂದು ಸಚಿವರು ಹೇಳಿದರು.
ಕೈಗಾರಿಕಾ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಎ.ಪಿ.ಎಂ ಮುಹಮ್ಮದ್ ಅನೀಶ್ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕಾ ಇಲಾಖಾ ನಿರ್ದೇಶಕ ಎಸ್.ಹರೀಶ್ ಕುಮಾರ್, ಕೆಎಸ್ಐಡಿ ಸಿ ಮಹಾ ನಿರ್ದೇಶಕ ಜಿ.ರಾಜಮಾಣಿಕ್ಯ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್, ಕಿನ್ಫ್ರಾ ನಿರ್ದೇಶಕ ಕೆ.ಎ ಸಂತೋಷ್ಮ್ ಕೋಶಿ , ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಬಂಧಕ ಕೆ.ಸಜಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.