ಉಡುಪಿ, ಜ 11 (DaijiworldNews/HR): ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ನಿಂತಿದ್ದ ಎರಡು ವಾಹನಕ್ಕೆ ಢಿಕ್ಕಿ ಹೊಡೆದು ಹಾನಿಗೊಳಿಸಿರುವ ಘಟನೆ ಉಡುಪಿಯ ಶ್ರೀ ಕೃಷ್ಣಮಠದ ಸಮೀಪ ನಡೆದಿದೆ.
ಕಾರು ಚಲಾಯಿಸುತ್ತಿದ್ದಾತನನ್ನು ಬೆಂಗಳೂರಿನ ಎಲಹಂಕದ ರಾಘವ್ ( 25 ವರ್ಷ) ಎಂದು ಗುರುತಿಸಲಾಗಿದೆ.
ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ನಿಂತಿದ್ದ ಎರಡು ವಾಹನಕ್ಕೆ ಹಾನಿಗೊಳಿಸಿದ್ದು, ಸ್ವಲ್ಪ ದೂರಲ್ಲೇ ನಿಂತಿದ್ದ ತಾಯಿ-ಮಗು ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಯನ್ನು ನೋಡಿದ ಸಾರ್ವಜನಿಕರು ಯುವಕಕರಿಗೆ ಪೆಟ್ಟು ಕೊಟ್ಟಿದ್ದು, ಬಳಿಕ ನಗರದ ಹೊಯ್ಸಳ ಪೊಲೀಸರು ಭೇಟಿ ನೀಡಿ ಯುವಕರನ್ನು ವಿಚಾರಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನು ಸದ್ಯ ನಗರ ಸಂಚಾರಿ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೆ ಪೊಲೀಸರೇ ಚಾಲಕನ ಮೇಲೆ ಡಿಡಿಐ ಕೇಸು ದಾಖಲು ಮಾಡಿದ್ದಾರೆ.