ಉಡುಪಿ ಅ17: "ರಾಜ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಅಹಂಕಾರ,ವಂಚನೆ ಹಾಗೂ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದರಲ್ಲಿ ಮಹಾ ಸಾಧನೆಗಳನ್ನು ಮಾಡಿದ್ದಾರೆ. ಎಲ್ಲಿ ಭ್ರಶ್ಟಾಚಾರವಿದ್ದಲ್ಲಿ ಕೈಯಾಡಿಸಿ ಲಾಭ ಪಡೆಯುವುದರಲ್ಲಿ ಮುಖ್ಯಮಂತ್ರಿಗಳು ನಿಸ್ಸೀಮರು. ಅವರ ಪಕ್ಷದ ವಿಚಾರಕ್ಕೆ ಬಂದರೆ ಕಾಂಗ್ರೆಸ್ಸನ್ನು’ಆಧುನಿಕ ಭಸ್ಮಾಸುರ’ ಎಂದು ಕರೆಯಬಹುದು. ಕಾಂಗ್ರೆಸ್ ಪಕ್ಷವು ಮಾಡಿದ್ದೆಲ್ಲವೂ ಅನಾಹುತಗಳಾಗಿ ಮಾರ್ಪಾಡಾಗುತ್ತದೆ." ಎಂದು ಕೇಂದ್ರ ರಾಸಾಯಣಿಕ ಹಾಗೂ ಕೃಶಿ ಗೊಬ್ಬರ ಖಾತೆ ಸಚಿವರಾದ ಅನಂತ ಕುಮಾರ್ ಕಾಂಗ್ರೆಸ್ ಪಕ್ಷ ಹಾಗೂ ಸಿದ್ಧರಾಮಯ್ಯರನ್ನು ಉದ್ದೇಶಿಸಿ ಲೇವಡಿ ಮಾಡಿದರು.
ಅವರು ಬ್ರಹ್ಮಾವರದಲ್ಲಿ ನಡೆದ ಪರಿವರ್ತನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
"ಚುನಾವಣೆಯಲ್ಲಿ ಗೆಲುವು ಪಡೆಯುವುದು ಎಂದರೆ ಓರ್ವ ರಾಜಕಾರಣಿಗೆ ಪುನರ್ಜನ್ಮ ದೊರಕಿದಂತೆ. ಜನರ ಆಶೀರ್ವಾದಗಳಿಂದ ಮಾತ್ರ ಇದು ಸಾಧ್ಯ. ಅರುವತ್ತ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಜಯಪ್ರಕಾಶ್ ಹೆಗ್ಡೆಯವರಿಗೂ ರಾಜಕೀಯವಾಗಿ ಇದೊಂದು ಪುನರ್ಜನ್ಮವೇ ಆಗಿದೆ. ಇದು ಪರಿವರ್ತನೆಯ ಯುಗ .ಕರ್ನಾಟಕದ ಜನರು ಕಾಂಗ್ರೆಸ್ ಆಡಳಿತದಿಂದಾಗಿ ಬೇಸತ್ತಿದ್ದಾರೆ ಹಾಗೂ ಪರಿವರ್ತನೆಯನ್ನು ಬಯಸುತ್ತಿದ್ದಾರೆ." ಎಂದು ಅವರು ಹೇಳಿದರು.
ಭಾರತೀಯ ಜನತಾ ಪಕ್ಷ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ನಡೆದ ಸಮಾವೇಶದ ವೇದಿಕೆಯಲ್ಲಿ ಮಾಜಿ ಮಂತ್ರಿಗಳಾದ ಆರ್. ಅಶೋಕ್,ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನಿಲ್ ಕುಮಾರ್, ವಿಧಾನ ಪರಿಷತ್ತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ,ಮಾಜಿ ಶಾಸಕ ರಘುಪತಿ ಭಟ್,ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.
ಈ ಸಂಧರ್ಭ ಸುಮಾರು ವಿವಿಧ ಪಕ್ಷಗಳಿಂದ ಸುಮಾರು 500 ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.