ಕಾಸರಗೋಡು, ಜ 10 (DaijiworldNews/HR): ಜಿಲ್ಲೆಯಲ್ಲಿ ಸೋಮವಾರ ಐವರಿಗೆ ಒಮಿಕ್ರಾನ್ ಹಾಗೂ 116 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾದಿಂದ 44 ಮಂದಿ ಗುಣಮುಖರಾಗಿದ್ದು, 796 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 4,981 ಮಂದಿ ನಿಗಾದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,44,589 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 1,42,521 ಮಂದಿ ಗುಣಮುಖರಾಗಿದ್ದಾರೆ.