ಉಡುಪಿ, ಜ,10 (DaijiworldNews/AN): ಕರಾವಳಿ ಕರ್ನಾಟಕದ ಪ್ರಖ್ಯಾತ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಉಪಕರಣ ಮಳಿಗೆ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಉಚಿತ ಗ್ಲುಕೋಮೀಟರ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೊಸ ವರ್ಷಾಚರಣೆಯ ಅಂಗವಾಗಿ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಸಂಸ್ಥೆಯು ವಿಶೇಷ ಯೋಜನೆಯಾಗಿ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ಗ್ಲುಕೋಮೀಟರ್ ಯಂತ್ರಗಳನ್ನು ವಿತರಿಸುತ್ತಿದ್ದು, 50ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ನ ಪ್ರತಿಯನ್ನು ನೀಡಿ ಈ ಉಚಿತ ಮಧುಮೇಹ ತಪಾಸಣಾ ಯಂತ್ರವನ್ನು ಪಡೆದುಕೊಳ್ಳಬಹುದು.
ಈ ಆಫರ್ ಗಿರಿಜಾ ಹೆಲ್ತ್ಕೇರ್ ಮತ್ತು ಸರ್ಜಿಕಲ್ಸ್ ಸಂಸ್ಥೆ ಉಡುಪಿ, ಮಂಗಳೂರು ಮತ್ತು ಕುಂದಾಪುರ ಶಾಖೆಗಳಲ್ಲಿ ಲಭ್ಯವಿದ್ದು, ಈಗಾಗಲೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಕೊಡುಗೆಯು ಜನವರಿ 15ರ ವರೆಗೆ ಲಭ್ಯವಿದೆ. ಈ ಗ್ಲುಕೋಮೀಟರ್ ಯಂತ್ರಗಳು ಉತ್ತಮ ಕಂಪನಿಯದ್ದಾಗಿದ್ದು, ಒಂದು ವರ್ಷ ವಾರಂಟಿಯನ್ನು ಹೊಂದಿವೆ. ಗ್ಲುಕೋಮೀಟರ್ ಉಚಿತವಾಗಿದ್ದು ಟೆಸ್ಟಿಂಗ್ ಸ್ಟ್ರಿಪ್ ಗಳನ್ನು ಗ್ರಾಹಕರು ಖರೀದಿಸಬೆಕಾಗುತ್ತದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು" ಎಂದು ಸಂಸ್ಥೆಯ ಮಾಲಿಕ ರವೀಂದ್ರ ಶೆಟ್ಟಿ ವಿನಂತಿಸಿದ್ದಾರೆ.