ಸುಳ್ಯ, ಜ 10 (DaijiworldNews/HR): ಹಿರಿಯ ರಂಗಕರ್ಮಿ, ಚಲನ ಚಿತ್ರ ನಿರ್ದೇಶಕ, ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಸಂಪಾಜೆ ಅವರು ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ದೇವಿಪ್ರಸಾದ್ ಸಂಪಾಜೆಯವರು ಜನವರಿ 3ರಂದು ಸುಳ್ಯದ ಅಮರ ಶ್ರೀ ಭಾಗ್ ನಲ್ಲಿ ನಡೆದ ಸಮಾರಂಭದಲ್ಲಿ ಅವರು 2019-20ನೇ ಸಾಲಿನ ಕರ್ನಾಟಕ ಅರೆಭಾಷೆ ಅಕಾಡಮಿಯ ಗೌರವ ಸ್ವೀಕರಿಸಿದ್ದರು.
ಇನ್ನು ಸಾಹಿತ್ಯ ಅಭಿಮಾನಿ ಹಾಗೂ ಲೇಖಕರು ಆಗಿದ್ದ ದೇವಿಪ್ರಸಾದ್ ಅವರ ಮನೆ ಅಪೂರ್ವ ಗ್ರಂಥಾಲಯವನ್ನು ಹೊಂದಿದ್ದು, ಅವರಿಗೆ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕದ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗಳು ಲಭಿಸಿದೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಬಂಧು ಮಿತ್ರಎಅನ್ನು ಅಗಲಿದ್ದಾರೆ.