ಕಾರ್ಕಳ, ಜ 09 (DaijiworldNews/HR): ಈದು ಗ್ರಾಮ ಪಂಚಾಯಿತ್ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಈದು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಗ್ರಾ.ಪಂ ಚುನಾವಣಾ ಸಂದರ್ಭದಲ್ಲಿ 24 ಘಂಟೆಯು ಉಚಿತ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಇತರ ಮೂಲ ಸೌಕರ್ಯದ ಅಶ್ವಾಸನೆ ಮೂಲಕ ಅಧಿಕಾರಕ್ಕೆ ಬಂದ ಈಗಿನ ಪಂಚಾಯಿತ್ ಆಡಳಿತ ವ್ಯವಸ್ಥೆಯಿಂದ ಹಲವು ಸಮಸ್ಸೆಗಳು ಎದುರಾಗಿದೆ. ಸಾರ್ವಜನಿಕರು ವಾರಗಟ್ಟಲೆ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಕಾಮಗಾರಿ ನೆನೆಗುದ್ದಿಗೆ ಬಿದಿದೆ. ಗ್ರಾ.ಪಂ ಹಣಕಾಸಿನ ಕೊರತೆ ಇದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. 1ವರ್ಷದಿಂದ ಈಚೆ ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ, ಲೈಸೆನ್ಸು ಪೀಸ್ ಇನ್ನಿತರ ಮೂಲಗಳಿಂದ ಸಂಗ್ರಹವಾದ ಲಕ್ಷಗಟ್ಟಲೇ ಹಣ ಲೆಕ್ಕಚಾರ ಏನಾಯಿತು" ಎಂದು ಪ್ರಶ್ನಿಸಿದ್ದಾರೆ.
ಇನ್ನು ವಿಧಾನ ಪರಿಷತ್ ಚುನಾವಣೆಯ ನೀತಿಸಂಹಿತೆ ಅವಧಿ ಡಿಸೆಂಬರ 14ಕ್ಕೆ ಮುಗಿದಿದ್ದರೂ ತುರ್ತು ಸೇವೆ ನೀಡಬೇಕಾದ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಸಾಮಾನ್ಯ ಸಭೆಯನ್ನೇ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.