ಬಂಟ್ವಾಳ, ಜ 09 (DaijiworldNews/HR): ತೆಂಗಿನಮರ ಕಡಿಯುವ ವೇಳೆ ಯುವಕನೋರ್ವನ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಶಂಭೂರು ಗ್ರಾಮದ ನಾಯಿಲದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ನಾಯಿಲ ಬೆಟ್ಟುಗದ್ದೆ ನಿವಾಸಿ ದಿ.ಪೂವಪ್ಪ ಪೂಜಾರಿ ಅವರ ಪುತ್ರ ಯತಿರಾಜ್(37) ಎಂದು ಗುರುತಿಸಲಾಗಿದೆ.
ಸ್ಥಳೀಯ ಕೃಷಿಕರೋರ್ವರ ತೋಟದಲ್ಲಿ ತೆಂಗಿನಮರ ಕಡಿಯುವ ವೇಳೆ ಘಟನೆ ನಡೆದಿದ್ದು, ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಯಿತ್ತಾದರೂ ಆದಾಗಲೇ ಮೃತಪಟ್ಟಿದ್ದರು.
ಇನ್ನು ಯತಿರಾಜ್ ಗೆ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಅವರು ಮರ ಕಡಿಯುವ ಕೆಲಸದ ಗುತ್ತಿಗೆ ವಹಿಸುತ್ತಿದ್ದರು.