ಉಡುಪಿ,ಜ 09 (DaijiworldNews/HR): ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪರ್ಯಾಯ ಮಹೋತ್ಸವದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿ ಪಾಲ್ಗೊಳ್ಳಿ ಎಂದು ಕೃಷ್ಣಾಪುರ ಮಠದ ಶ್ರೀಪಾದರು ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ದೇಶದಲ್ಲಿ ಕೊರೊನಾ ಹೆಚ್ಚುತ್ತಿದ್ದು, ನಾವು ಅಜಾಗರುಕತೆಯಿಂದ ನಡೆದುಕೊಂಡರೆ ಮುಂದೆ ಸಂಭವಿಸುವ ಅನಾಹುತಗಳಿಗೆ ನಾವೇ ಕಾರಣರಾಗುತ್ತೇವೆ. ಹಾಗಾಗಿ, ನಮ್ಮ ಮಠದ ಶಿಷ್ಯರುಗಳು, ಅಭಿಮಾನಿಗಳು, ಭಕ್ತರು ಸರಕಾರ ವಿಧಿಸಿರುವ ನಿಯಮಗಳನ್ನು ನಿಷ್ಠೆಯಿಂದ ಪಾಲಿಸೋಣ. ಪರ್ಯಾಯದ ವೈಭವವನ್ನು ಸಾಂಪ್ರಾದಾಯಿಕವಾಗಿ ನಡೆಸೋಣ" ಎಂದಿದ್ದಾರೆ.
ಇನ್ನು "ಮುಖ್ಯವಾದ ಆಚರಣೆಗಳನ್ನು ನಡೆಸಿ ದೇವರಿಗೆ ಅರ್ಪಿಸಿದಾಗ ದೇವರ ಕೃಪೆಯ ಜೊತೆಗೆ, ಜನರ ಆರೋಗ್ಯ ರಕ್ಷಣೆ ಮಾಡಿದಂತಾಗುತ್ತದೆ. ಹಾಗಾಗಿ ನಿಯಮಬದ್ಧವಾಗಿ ಜನರು ಪರ್ಯಾಯದಲ್ಲಿ ಭಾಗವಹಿಸಿ, ಸರಕಾರದ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.