ಮಂಗಳೂರು, ಜ. 08 (DaijiworldNews/SM): ರಾಜ್ಯ ಸರಕಾರ ಸೋಂಕು ನಿಯಂತ್ರಣ ಮಾಡುವ ಹೆಸರಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ್ದು, ಈ ವೇಳೆ ಕೆಲವು ಜನರು ನಿಯಮ ಉಲ್ಲಂಘಿಸಿರುವ ಆರೋಪ ವ್ಯಕ್ತವಾಗಿದೆ. ಅಲ್ಲದೆ, ನಿಯಮ ಮೀರಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ದಂಡ ಸಂಗ್ರಹಿಸಲಾಗಿದೆ.
ಕೋವಿಡ್ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ 517 ಪ್ರಕರಣಗಳು ದಾಖಲಾಗಿವೆ. 369 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. 110 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ದಂಡ ಸಂಗ್ರಹಿಸಿದ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.