ಕಾಸರಗೋಡು, ಜ. 08 (DaijiworldNews/SM): ಜಿಲ್ಲೆಯಲ್ಲಿ ಶನಿವಾರ 150 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, 41 ಮಂದಿ ಗುಣಮುಖರಾಗಿದ್ದಾರೆ.
615 ಮಂದಿ ಚಿಕಿತ್ಸೆಯಲ್ಲಿದ್ದಾರೆ. 4,515 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 1,44,326 ಮಂದಿಗೆ ಕೊರೋನಾ ಸೋಂಕು ದ್ರಢಪಟ್ಟಿದ್ದು 1,42,439 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಮೂರು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.