ಕುಂದಾಪುರ, ಜ 08 (DaijiworldNews/PY): ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಂದರ್ಭ ಹಣ ಕಳೆದುಕೊಂಡ ವ್ಯಕ್ತಿಗೆ ಹಣವನ್ನು ಹಿಂದಿರುಗಿಸುವ ಮೂಲಕ ಡಿಸಿಸಿ ಬ್ಯಾಂಕ್ನ ವಾಹನ ಚಾಲಕ ರಾಜೇಶ್ ಬಡಾಕೆರೆ ಪ್ರಾಮಾಣಿಕತೆ ಮೆರೆದಿದ್ಧಾರೆ.
ರಾಜೇಶ್ ಅವರಿಗೆ 36,350 ರೂ. ದೊರಕಿದ್ದು, ಹಣ ಕಳೆದುಕೊಂಡಿದ್ದ ರತ್ನಾಕರ ಪೂಜಾರಿ ಅವರಿಗೆ ಹಿಂದಿರುಗಿಸಿದ್ದಾರೆ. ಇವರ ಪ್ರಾಮಾಣಿಕತೆಗೆ ಮರವಂತೆ- ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್ .ರಾಜು ಪೂಜಾರಿ ಅವರು ರಾಜೇಶ್ ಅವರನ್ನು ಗೌರವಿಸಿದ್ದಾರೆ.
ಈ ವೇಳೆ ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.