ಮಂಗಳೂರು, ಡಿ 08 (DaijiworldNews/MS): ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಅರುಣ್ ಜಿ.ಶೇಟ್ ಜುವೆಲ್ಸ್ ಆಂಡ್ ಡೈಮಂಡ್ ವರ್ಕ್ಸ್ ಗೆ 2021 ಮಾ.4ರಂದು ಚಿನ್ನಾಭರಣ ಖರೀದಿಗೆಂದು ಬಂದಿದ್ದ ಹೊಸದುರ್ಗ ತಾಲೂಕಿನ ಸಜು.ಜೆ.ಜಿ (30) 12,800 ರೂ. ಮೌಲ್ಯದ ಚಿನ್ನದ ಉಂಗುರವನ್ನು ಕಸಿದು ಓಡಿ ಹೋಗಿದ್ದ. ಇದಾದ ಬಳಿಕ ಆತನನ್ನು ಬಂಧಿಸಲಾಗಿತ್ತು.
ವಿಚಾರಣೆ ನಡೇಸಿದ 2ನೇ ಸಿಜೆಎಂ ನ್ಯಾಯಾಲಯ ನ್ಯಾಯಾಧೀಶರಾದ ಶಿಲ್ಪಾ ಎ.ಜಿ ಅವರು ಸಜು ತಪ್ಪಿತಸ್ಥನೆಂದು ಪರಿಗಣಿಸಿದ್ದಾರೆ. ಆತನಿಗೆ 2 ವರ್ಷ ಕಠಿಣ ಸಜೆ ಮತ್ತು 5000 ರೂ.ದಂಡ ವಿಧಿಸಿದ್ದಾರೆ.ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್. ಬಿ ಅವರು ವಾದಿಸಿದ್ದಾರೆ.