ಮಂಗಳೂರು, ಜ 07 (DaijiworldNews/PY): ಹಿರಿಯ ಪೊಲೀಸ್ ಅಧಿಕಾರಿ ಕಮಲೇಶ್ ತೊಂಡಿಹಾಳ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, "ಪೊಲೀಸ್ ಕುಟುಂಬದ ಕಿರಿಯ ಸದಸ್ಯ ಎಪಿಸಿ 2817 ಕಮಲೇಶ್ ತೊಂಡಿಹಾಳ ಅನಾರೋಗ್ಯದಿಂದಾಗಿ ನಾರಾಯಣ ಹೃದಯಾಲಯ ಬೆಂಗಳೂರು ಇಲ್ಲಿ ನಿಧನ ಹೊಂದಿರುತ್ತಾರೆ. ಇವರು ಮಂಗಳೂರು ನಗರ ಸಿಎಆರ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ" ಎಂದು ತಿಳಿಸಿದ್ದಾರೆ.