ವಿಟ್ಲ, ಜ 07 (DaijiworldNews/PY): ಕೊರಗಜ್ಜ ದೈವದ ಅಪಮಾನಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ಕೇಶವ ದೈಪಲ ಆರೋಪಿ ಅಜೀಜ್ ವಿರುದ್ಧ ವಿಟ್ಲ ಪೋಲಿಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಮಂಡಲ ಪ್ರಧಾನಕಾರ್ಯದರ್ಶಿ ರವೀಶ್ ಶೆಟ್ಟಿ, ಕೊಳ್ನಾಡು ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಯುವಮೋರ್ಚಾದ ಮಂಡಲ ಅಧ್ಯಕ್ಷ ಪ್ರದೀಪ್ ಅಜ್ಜೀಬೆಟ್ಟು, ಪ್ರಮುಖರಾದ ಪುಷ್ಪರಾಜ್ ಚೌಟ, ಲೋಹಿತ್ ಕೆಳಗಿನ ಅಗರಿ, ನಾಗೇಶ್ ಶೆಟ್ಟಿ ಕೊಡಂಗಾಯಿ, ಅಭಿಷೇಕ್ ರೈ, ವಿನೋದ್ ಪಟ್ಲ, ಆನಂದ್ ಪೂಜಾರಿ ಮಾವೆ, ಕೃಷ್ಣಪ್ರಸಾದ್ ಶೆಟ್ಟಿ ಮಲಾರ್, ನಾಗರಾಜ್ ಆಳ್ವ, ರಮೇಶ್ ಶೆಟ್ಟಿ ಕಾರಜೆ, ಮನೋಜ್ ಉಪಸ್ಥಿತರಿದ್ದರು.