ಕಾಸರಗೋಡು, ಜ 07 (DaijiworldNews/PY): ಜಿಲ್ಲೆಯಲ್ಲಿ ಶುಕ್ರವಾರ 71 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ನಡುವೆ ಇಂದು 34 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಒಟ್ಟು 1,42,398 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 506 ಮಂದಿ ಚಿಕಿತ್ಸೆಯಲ್ಲಿದ್ದು, 4,361 ಮಂದಿ ನಿಗಾದಲ್ಲಿದ್ದಾರೆ.
ಈವರೆಗೆ ಸೋಂಕಿಗೆ 840 ಮಂದಿ ಮೃತಪಟ್ಟಿದ್ದಾರೆ.