ಸುಳ್ಯ, ಜ. 07 (DaijiworldNews/SM): ಆಲೆಟ್ಟಿ ಗ್ರಾಮದ ಅರಂಬೂರು ಸರಳಿಕುಂಜದಲ್ಲಿ ಒಂಟಿ ಕಾಡಾನೆಯೊಂದು ಬೆಳ್ಳಂಬೆಳಗ್ಗೆ ತೋಟದ ಒಳಗೆ ನುಗ್ಗಿ ಕೃಷಿ ಹಾನಿಗೊಳಿಸಿದ ಘಟನೆ ಶುಕ್ರವಾರದಂದು ವರದಿಯಾಗಿದೆ.
ಇಂದು ಬೆಳಗ್ಗೆ ಆಲೆಟ್ಟಿ ಪಂಚಾಯತ್ ಸದಸ್ಯ ರತೀಶನ್ ರವರು ಸಂಬಂಧಿಕರಾದ ಸರಳಿಕುಂಜ ತಿಮ್ಮಪ್ಪನ್ ರವರ ಮನೆಯ ಕಡೆಗೆ ಹೋಗುತ್ತಿದ್ದಾಗ ತೋಟದಲ್ಲಿ ಕಾಡಾನೆ ಇರುವುದನ್ನು ಗಮನಿಸಿದರು. ಬಳಿಕ ಮನೆಯವರಿಗೆ ವಿಷಯ ತಿಳಿಸಲು ಮನೆಗೆ ಹೋಗಿ ಬರುವಷ್ಟರಲ್ಲಿ ಆನೆ ಮತ್ತೆ ಬಂದ ದಾರಿಯಲ್ಲಿ ಹಿಂತಿರುಗಿದೆ. ತೋಟದಲ್ಲಿ ಬಾಳೆ ಗಿಡವನ್ನು ನಾಶ ಪಡಿಸಿದೆ ಎಂದು ವರದಿಯಾಗಿದೆ.