ಕಾಸರಗೋಡು, ಡಿ 04 (MSP): ದಿನೇ ದಿನೇ ಹೋಟೆಲ್ ತಿಂಡಿ ತಿನಿಸುಗಳ ಬೆಲೆಗಳು ಗಗನಕ್ಕೇರುತ್ತಿದ್ದು ಗ್ರಾಹಕರು ಹೋಟೆಲ್ ಗಳಲ್ಲಿ ಊಟದ ದರ ಕೇಳಿದರೆ ದಂಗಾಗುವಷ್ಟಿದೆ. ದಿನಕ್ಕೆ ಒಂದೆರಡು ಬಾರಿ ಅಥವಾ ಹೊಟೇಲ್ ತಿಂಡಿಗಳನ್ನು ನಂಬಿ ಬದುಕುವ ಆದಷ್ಟು ಮಂದಿ ಈಗ ಬೆಲೆ ಏರಿಕೆಯಿಂದ ಕಂಗಾಲಾಗುವಂತೆ ಮಾಡಿದೆ. ಕಳೆದ ಎರಡು ಮೂರು ವರ್ಷಗಳಿಂದ ಹೋಟೆಲ್ ತಿಂಡಿ ತಿನಿಸು, ಊಟದ ಬೆಲೆನಾಲ್ಕರಿಂದ ಐದು ಪಟ್ಟಿನಷ್ಟು ಏರಿಕೆಯಾಗಿದೆ.
ಆದರೆ ಕಾಸರಗೋಡು ನಗರದ ಹೋಟೆಲ್ ವೊಂದು ಗ್ರಾಹಕರಿಗೆ ಇಂದು ಒಂದು ರೂ . ಗೆ ಊಟ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಸ್ತಾಪನೆಯಾಗಿ ’ಐವತೈದು ವರ್ಷ’ ಪೂರೈಸಿದ ಹಿನ್ನಲೆಯಲ್ಲಿ ಕಾಸರಗೋಡು ಹಳೆ ಬಸ್ಸು ನಿಲ್ದಾಣ ಪರಿಸರದ ಪ್ರಸಾದ್ ಹೋಟೆಲ್ ತನ್ನ 40 ವರ್ಷದ ಹಿಂದಿನ ದರವಾದ "ಒಂದು ರೂ.ಗೆ" ಊಟ ನೀಡಿದ್ದು , 1,100 ಗಿಂತಲೂ ಅಧಿಕ ಮಂದಿ ಊಟ ಸೇವಿಸಿದರು. 2013 ರಲ್ಲಿ ಹೋಟೆಲ್ ಸ್ಥಾಪನೆಯಾಗಿ ೫೦ ವರ್ಷ ತುಂಬಿದ ನೆನಪಲ್ಲಿ ೫೦ ಪೈಸೆಗೆ ಊಟ ನೀಡಿದ್ದರು
ಶುದ್ಧ ತರಕಾರಿ ಆಹಾರಕ್ಕೆ ಹೆಸರಾಗಿರುವ ಈ ಹೊಟೇಲ್ ಗೆ , ಈ ತನಕ ಪ್ರೋತ್ಸಾಹಿಸಿದ ಗ್ರಾಹಕರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಉದ್ದೇಶದಿಂದ 40 ವರ್ಷದ ಹಿಂದಿನ ದರದಲ್ಲಿ ಭೋಜನ ವ್ಯವಸ್ಥೆಯನ್ನು ಮಾಡಿ ಗಮನ ಸೆಳೆದರು. ಡಿ.4 ರಂದು 1963 ರಲ್ಲಿ ಸ್ಥಾಪಿಸಲ್ಪಟ್ಟ ಹೊಟೇಲ್ ಪ್ರಸಾದ್ 1978 ಡಿ.4 ರಿಂದ ರಾಮ್ ಪ್ರಸಾದ್ ಮಾಲಕತ್ವದಲ್ಲಿ ಮುನ್ನಡೆಸುತ್ತಿದ್ದಾರೆ