ಕಾಸರಗೋಡು, ಡಿ 07 (DaijiworldNews/MS): ಇಲ್ಲಿನ ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಎಂ.ರಮಾ ಅವರಿಗೆ ಕಾಲೇಜಿನೊಳಗೆ ಅವಹೇಳನಗೈದು ಹತ್ಯೆ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿ 30 ಮಂದಿ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಕಾಲೇಜಿನ 22ನೇ ಸಂಖ್ಯೆಯ ತರಗತಿ ಕೊಠಡಿಯಲ್ಲಿ ಕಾಲೇಜಿಗೆ ಸಂಬಂಧವಿಲ್ಲದ 30 ಮಂದಿ ಕುಳಿತುಕೊಂಡಿದ್ದರು. ಅವರನ್ನು ಪ್ರಶ್ನಿಸಿದಾಗ ಅವಹೇಳನಗೈದು ಹತ್ಯೆ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.
ಮೌಲ್ಯ ನಿರ್ಣಯ ಶಿಬಿರ ನಡೆಯುತ್ತಿರುವುದರಿಂದಾಗಿ ಯಾವುದೇ ತರಗತಿ ನಡೆಯುತ್ತಿರಲಿಲ್ಲ. ಕಾಲೇಜಿನಲ್ಲಿ ನಡೆಯುತ್ತಿರುವ ದುರಸ್ತಿ ಕೆಲಸಗಳನ್ನು ಪರಿಶೀಲಿಸಿ ಹಿಂತಿರುಗುವಾಗ ತರಗತಿಯಲ್ಲಿ ಜನರ ಗುಂಪು ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆಗೆ ಯತ್ನನಡೆಯಿತು. ವರೆಲ್ಲರೂ ಮುಸ್ಲಿಂ ಲೀಗ್ ಕಾರ್ಯಕರ್ತರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.