ಕಾಸರಗೋಡು, ಜ 06 (DaijiworldNews/HR): ಜಿಲ್ಲೆಯಲ್ಲಿ ಗುರುವಾರ ಇಬ್ಬರಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ.
ವಿದೇಶದಿಂದ ಬಂದಿದ್ದ ತ್ರಿಕ್ಕರಿಪುರ ಮತ್ತು ಬದಿಯಡ್ಕ ನಿವಾಸಿಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದ್ದು, ಕೋಜಿಕ್ಕೋಡ್ ವಿಮಾನ ನಿಲ್ದಾಣ ಮೂಲಕ ತ್ರಿಕ್ಕರಿಪುರ ನಿವಾಸಿ ವಿದೇಶದಿಂದ ಊರಿಗೆ ಬಂದಿದ್ದು, ಪತಿಯನ್ನು ಕರೆದುಕೊಂಡು ಬರಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಪತ್ನಿ ಸಂಬಂಧಿಕರನ್ನು ನಿಗಾದಲ್ಲಿರಿಸಲಾಗಿದೆ.
ಈ ನಡುವೆ ದುಬೈಯಿಂದ ಆಗಮಿಸಿದ್ದ ಬದಿಯಡ್ಕದ 48ರ ಹರೆಯದ ವ್ಯಕ್ತಿಗೂ ಸೋಂಕು ಪತ್ತೆಯಾಗಿದೆ.
ಜನವರಿ ಒಂದರಂದು ಊರಿಗೆ ಬಂದಿದ್ದ ಇವರ ಸ್ಯಾಂಪಲನ್ನು ತಪಾಸಣೆಗೆ ಕಳುಹಿಸಲಾಗಿತ್ತು. ತಪಾಸಣೆ ಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಇವರ ಸಂಪರ್ಕದ ವ್ಯಕ್ತಿಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.
ದಿನಗಳ ಹಿಂದೆ ಮಧೂರು ನಿವಾಸಿಯಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ನಿಗಾ ಇರಿಸಿದೆ.