ಉಡುಪಿ, ಜ 06 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ರಕ್ಷಣೆಗಾಗಿ ಶಾಲಕ ಋಕ್ ಸಂಹಿತಾ ಯಾಗ ನಡೆಸಲಾಯಿತು ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ಕೊಡವೂರಲ್ಲಿ ನಡೆಯುತ್ತಿರುವ ಯಾಗದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ನಮ್ಮ ರಕ್ಷಣೆಗೆ ಪ್ರಧಾನಿ ಚೌಕಿದಾರ್ ಅಂತ ಕೆಲಸ ಮಾಡುತ್ತಿದ್ದಾರೆ. ಹಗಲು, ರಾತ್ರಿ ಛಲ ಪಟ್ಟು ದೇಶ ರಕ್ಷಣೆ ಮಾಡುತ್ತಿದ್ದಾರೆ. ಪ್ರಧಾನಿಗೆ ನೆನ್ನೆಯಂತೆ ಅವಗಡಗಳು ಇನ್ನು ಮುಂದೆ ಎದುರಾಗದಿರಲಿ. ಏನೇ ಸಮಸ್ಯೆಗಳಿದ್ದರೂ ಈ ಯಾಗದಿಂದ ಪರಿಹಾರವಾಗಲಿ ಎಂದು ಈ ಯಾಗ ಮಾಡುತ್ತಿದ್ದೇವೆ" ಎಂದರು.
ಇನ್ನು ಪ್ರಧಾನಿ ಮೋದಿಯವರು ಮೋದಿ ನೂರುಕಾಲ ಬಾಳಲಿ ನಮ್ಮ ದೇಶ ಸುಭಿಕ್ಷ ವಾಗಲಿ ಎಂದು ಶಾಲಕ ಋಕ್ ಸಂಹಿತಾ ಯಾಗವನ್ನು ಮಾಡಲಾಗಿದೆ ಎಂದು ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.