ಮಂಗಳೂರು ಅ16: ರಾಜ್ಯ ಅಹಾರ ಹಾಗೂ ಸಾರ್ವಜಣಿಕ ಸರಬರಾಜು ಸಚಿವರಾದ ಯು.ಟಿ ಖಾದರ್ ಮಂಗಳೂರಿನಲ್ಲೂ ಇಂದಿರಾ ಕ್ಯಾಂಟಿನ್ ಗಳ ಘೋಷಣೆ ಮಾಡಿದ್ದಾರೆ. ಮಂಗಳೂರು ಸಿಟಿ ಕಾರ್ಪೊರೇಶನ್ ಹಾಗೂ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮುಂದಿನ ವರ್ಷ ಜನೆವರಿ ತಿಂಗಳಿನಿಂದ ಈ ಕ್ಯಾಂಟೀನ್ ಗಳು ಸಾರ್ವಜಣಿಕರಿಗಾಗಿ ತೆರೆದುಕೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ಇಂದು ನಡೆದ ಪತ್ರಿಕಾಗೋಶ್ಠಿಯಲ್ಲಿ ಅವರು ನೂತನ ಇಂದಿನ ಕ್ಯಾಂಟಿನ್ ಗಳ ವಿವರಗಳನ್ನು ನೀಡುತ್ತಾ " ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆದೇಶದ ಮೇರೆಗೆ ಎಲ್ಲರಿಗೂ ಕಡಿಮೆ ದರದಲ್ಲಿ ಅಹಾರ ದೊರೆಯಬೇಕೆಂದು ಇಂದಿರಾ ಕ್ಯಾಂಟಿನ್ ಗಳ ಉಗಮವಾಗಿದೆ. ಮಂಗಳೂರು ನಗರ ಪ್ರದೇಶದಲ್ಲಿ ಐದು ಹಾಗೂ ಬಂಟ್ವಾಳ,ಪುತ್ತೂರು,ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಒಂದರಂತೆ ಈ ಕ್ಯಾಂಟಿನ್ ಗಳು ಕಾರ್ಯಚರಿಸಲಿವೆ" ಎಂದರು
ಇದೇ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲರ ಮೇಲೆ ಬಿಜೆಪಿ ನಾಯಕರು ಮಾಡುತ್ತಿರುವ ಅರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು " ಬಿಜೆಪಿಗರಿಗೆ ಕೆ.ಸಿ ವೇಣುಗೋಪಾಲ್ ರವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟುವುದರಲ್ಲಿ ಗಳಿಸುತ್ತಿರುವ ಯಶಸ್ಸನ್ನು ಅರಗಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಅವರು ವೇಣುಗೋಪಾಲರ ಮೇಲೆ ಅರೋಪ ಹಾಗೂ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ನಿಜವಾಗಿಯೂ ಸಾಮನ್ಯ ಜನರ ಬಗ್ಗೆ ಕಾಳಜಿ ಇದ್ದರೆ ಅವರು ಇಂತಹ ಕೆಲಸಗಳಿಂದ ದೂರವಿದ್ದು ಜನಪರ ಕೆಲಸಗಳ ಬಗ್ಗೆ ಗಮನ ಹರಿಸಲಿ" ಎಂದರು.