ಕಾಸರಗೋಡು, , ಡಿ 06 (DaijiworldNews/MS): 14 ವರ್ಷದ ಬಾಲಕನಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದ ಪ್ರಕರಣದಕ್ಕೆ ಸಂಬಂಧಿಸಿ ಕಣ್ಣೂರು ಮೂಲದ ವ್ಯಕ್ತಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಕೋಳಿಯಾಡ್ ನಿವಾಸಿ ಬಿನೋಯ್ (50) ಬಂಧಿತ ವ್ಯಕ್ತಿ.ಬದಿಯಡ್ಕದ ಪಳ್ಳತ್ತಡ್ಕ ಚಾಲಕೋಡಿನಲ್ಲಿ ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ ಬಿನೋಯ್ನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ರಬ್ಬರ್ ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ.
ವಿದ್ಯಾರ್ಥಿನಿ ಮುಂದೆ ನಗ್ನ ದೇಹ ಪ್ರದರ್ಶನ - ಯುವಕನ ಬಂಧನ:
ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಮುಂದೆ ಬೈಕ್ ನಲ್ಲಿ ಬಂದ ಯುವಕನೋರ್ವ ನಗ್ನ ದೇಹ ಪ್ರದರ್ಶಿಸಿದ ಘಟನೆ ನಡೆದಿದ್ದು , ಈತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಆರೋಪಿ ಅಜಾನೂರು ರಾವಣೇಶ್ವರ ನಿವಾಸಿ ರಾಜೇಂದ್ರನ್ (35)ನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ರಿಮಾಂಡ್ ವಿಧಿಸಿದೆ.