ಬಂಟ್ವಾಳ, ಜ. 05 (DaijiworldNews/SM): ಅಕ್ರಮವಾಗಿ ಕಲ್ಲಿನ ಕೋರೆಯಲ್ಲಿ ಸ್ಫೋಟಕ ಉಪಕರಣಗಳನ್ನು ಬಳಸಿ ಕಪ್ಪು ಕಲ್ಲು ಸ್ಪೋಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತ್ರತ್ವದಲ್ಲಿ ದಾಳಿ ನಡೆಸಿದ ಘಟನೆ ಕಾವಳಪಡೂರು ಎಂಬಲ್ಲಿ ನಡೆದಿದೆ.
ಇಂದು ಮುಂಜಾನೆ ವೇಳೆ ಸ್ಫೋಟ ಮಾಡಿದ್ದಾರೆ ಎಂಬ ಸಾರ್ವಜನಿಕ ರ ದೂರಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾವಳಪಡೂರು ಗಣನಾಥ ಶೆಟ್ಟಿ ಎಂಬವರಿಗೆ ಸೇರಿದ ಕಲ್ಲಿನ ಕೋರೆಯಲ್ಲಿ ಸ್ಫೋಟ ಮಾಡಿದ್ದಾರೆ ಎಂಬ ದೂರು ಸಾರ್ವಜನಿಕರು ನೀಡಿದ್ದರು. ದಾಳಿಯ ವೇಳೆ ಸ್ಥಳದಲ್ಲಿದ್ದ ಹಿಟಾಚಿ ಯನ್ನು ವಶಕ್ಕೆ ಪಡೆಯಲಾಗಿದೆ.
ಕೋರೆಯ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕಾಗಿ ಗಣಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದ್ದಾರೆ. ದಾಳಿಯ ವೇಳೆ ಕಂದಾಯ ನಿರೀಕ್ಷಕ ಕುಮಾರ್, ಗ್ರಾಮ ಕರಣೀಕೆ ಆಶಾ ಮೆಹಂದಲೆ ಹಾಜರಿದ್ದರು.