ಸುಳ್ಯ, ಡಿ 05(DaijiworldNews/MS): ಆನೆ ತುಳಿತಕ್ಕೊಳಗಾಗಿ ಕಾರ್ಮಿಕರೊಬ್ಬರು ಸಾವಿಗೀಡಾಗಿರುವ ದಾರುಣ ಘಟನೆ ಮದೆನಾಡಿನಲ್ಲಿ ನಡೆದಿದೆ. ಮೃತರನ್ನು ಪೆರಾಜೆಯ ಶಿವಪ್ರಸಾದ್ ಎಂದು ಗುರುತಿಸಲಾಗಿದೆ.
ಮೆದೆ ಗ್ರಾಮದ ಬೆಟ್ಟತ್ತೂರು ಭಾಗದಲ್ಲಿ ತೋಟದ ಕೆಲಸಕ್ಕೆ ತೆರಳಿದ ವೇಳೆ ಸಂದರ್ಭ ಶಿವಪ್ರಸಾದ್ ಅವರನ್ನು ಕಾಡಾನೆ ತುಳಿದು ಸಾಯಿಸಿದೆ ಎಂದು ತಿಳಿದು ಬಂದಿದೆ
ಸ್ಥಳಕ್ಕೆ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.