ಕಾಸರಗೋಡು, ಜ. 4 (DaijiworldNews/SM): ಒಮಿಕ್ರಾನ್ ಸೋಂಕು ಹಿನ್ನಲೆಯಲ್ಲಿ ಕೇರಳದಲ್ಲಿ ನಿಯಂತ್ರಣ ಜಾರಿಗೆ ತರಲು ಕೇರಳ ಸರಕಾರ ತೀರ್ಮಾನಿಸಿದೆ. ವಿವಾಹ, ಧಾರ್ಮಿಕ ,ಮರಣಾನಂತರದ ಕಾರ್ಯಕ್ರಮ, ರಾಜಕೀಯ ಕಾರ್ಯಕ್ರಮ, ಸಭೆ , ಸಮಾರಂಭ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನಿಯಂತ್ರಣ ಹೇರಲಾಗಿದೆ.
ಒಳಾಂಗಣ ಕಾರ್ಯಕ್ರಮಕ್ಕೆ 75 ಮಂದಿ , ಹೊರಾಂಗಣ ಕಾರ್ಯಕ್ರಮಕ್ಕೆ 150 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿದೇಶಗಳಿಂದ ಆಗಮಿಸುವ ರೋಗ ಲಕ್ಷಣ ಹೊಂದಿರುವವರಿಗೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸ ಲು ತೀರ್ಮಾನಿಸಲಾಗಿದೆ.
ಇದುವರೆಗೆ ಕೇರಳದಲ್ಲಿ 181 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ.